ಉದಯವಾಹಿನಿ, ಬೆಳಗಾವಿ: ನಗರದ ಮಂಡೋಳಿ ರಸ್ತೆಯಲ್ಲಿರುವ ವಕೀಲೆಯೊಬ್ಬರ ಮನೆ ಮೇಲೆ ಗುಂಡಿನ ದಾಳಿ ನಡೆದಿರುವ ಆತಂಕಕಾರಿ ಘಟನೆ ನಡೆದಿದೆ.
ವಕೀಲೆ ಪೂಜಾ ಕಾಕತಕರ್ ಮನೆ ಮೇಲೆ ದಾಳಿ ನಡೆದಿ ದೆ. ಏ.25ರ ರಾತ್ರಿ 1ರಿಂದ 2 ಗಂಟೆಯ ಸುಮಾರಿನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ.
ಮನೆಯ ಮೊದಲ ಮಹಡಿಯಲ್ಲಿ ಪುತ್ರಿ ಓದುತ್ತಿದ್ದಳು. ಈ ವೇಳೆ ದಾಳಿ ನಡೆದಿದೆ. ಮನೆಯ ಗ್ಲಾಸ್ ಮೇಲೆ ಫೈರಿಂಗ್ ಮಾರ್ಕ್ ಬಿದ್ದಿದ್ದು, ಘಟನಾ ಸ್ಥಳಕ್ಕೆ ಸುಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಪೂಜಾ ಅವರು ಕಳೆದ 18 ವರ್ಷಗಳಿಂದ ವಕೀಲಿ ವೃತ್ತಿಯನ್ನು ಮಾಡುತ್ತಿದ್ದಾರೆ. ಅವರು ಹೈ ಪ್ರೊಫೈಲ್ ಕೇಸ್ ಪರ ವಾದ ಮಾಡುತ್ತಿದ್ದಾರೆ. ಅವರ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!