ಉದಯವಾಹಿನಿ, ನ್ಯೂಯಾರ್ಕ್: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮತ್ತು ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ತಮ್ಮನ್ನು ಎರಡು ಬಾರಿ ಬಂಧಿಸಲಾಗಿತ್ತು ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮುಖ್ಯಸ್ಥ ಕಾಶ್ ಪಟೇಲ್ ಹೇಳಿದ್ದಾರೆ. ಈ ಘಟನೆ ವರ್ಜೀನಿಯಾ ಮತ್ತು ನ್ಯೂಯಾರ್ಕ್ (New York) ನಲ್ಲಿ ನಡೆದಿತ್ತು. ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಮದ್ಯ ಸೇವಿಸಿ ಮನೆಗೆ ನಡೆದುಕೊಂಡು ಹೋಗುವಾಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೆ. ಆಗ ಪೊಲೀಸರು ನಮ್ಮನ್ನು ತಡೆದು ಬಂಧಿಸಿದರು ಎಂದು ಹೇಳಿದ್ದಾರೆ.
ಕಾಶ್ ಪಟೇಲ್ ಅವರು 2005ರಲ್ಲಿ ಕೆಲಸ ಮಾಡುತ್ತಿದ್ದ ಮಿಯಾಮಿ-ಡೇಡ್ ಪಬ್ಲಿಕ್ ಡಿಫೆಂಡರ್ ಕಚೇರಿಯ ಸಿಬ್ಬಂದಿ ಫೈಲ್‌ನಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಅವರು ನಾವು ಕೆಲವು ಸ್ಥಳೀಯ ಬಾರ್ ಗಳಿಗೆ ಹೋಗಿ ಮದ್ಯ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಯೌವನದಲ್ಲಿ ತಾನು ಎರಡು ಬಾರಿ ಬಂಧನಕ್ಕೆ ಒಳಗಾಗಿದ್ದೇನೆ. ಒಮ್ಮೆ ವರ್ಜೀನಿಯಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ದ್ರವ್ಯ ಸೇವಿಸಿದ್ದಕ್ಕಾಗಿ ಇನ್ನೊಂದು ಬಾರಿ ಕಾನೂನು ವಿದ್ಯಾರ್ಥಿಯಾಗಿದ್ದಾಗ ನ್ಯೂಯಾರ್ಕ್ ನಗರದ ಬಾರ್‌ನಿಂದ ಹೊರಬಂದ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿರುವುದಕ್ಕೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!