
ಉದಯವಾಹಿನಿ ಕುಶಾಲನಗರ;- “ ಪೂರ್ಣತಯಾರಿ ಮತ್ತು ಅಭ್ಯಾಸದ ಮೂಲಕ ಪರಿಪೂರ್ಣತೆಗಾಗಿ ಶ್ರಮಿಸುವಂತೆ” ಕೊಡಗು ಜಿಲ್ಲಾಧಿಕಾರಿಯವರಾದ ವೆಂಕಟರಾಜ್ ರವರು ಕರೆ ನೀಡಿದರು.
ಕೂಡಿಗೆಯ ಸೈನಿಕ ಶಾಲೆಯಲ್ಲಿ ಎರ್ಪಡಿಸಲಾಗಿದ್ದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಆತಿಧಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತೋರಿದ ಶಿಸ್ತನ್ನು ಕುರಿತು ಪ್ರಶಂಸಿದರು. ಇದರೊಂದಿಗೆ, ವ್ಯಕ್ತಿತ್ವರಚನೆ ಮತ್ತು ಸಾಂಘಿಕ ಹೋರಾಟದ ಮೌಲ್ಯಗಳ ಅರಿವು ಮೂಡಿಸುವಲ್ಲಿ ಕ್ರೀಡೆಯು ಮಹತ್ವದ್ದಾಗಿದೆ ಎಂದರು ಕಾರ್ಯಕ್ರಮದ ಮೊದಲಿಗೆ ಜಿಲ್ಲಾಧಿಕಾರಿಯವರು ಶಾಲೆಯಲ್ಲಿನ ರಾಷ್ಟçಕವಿ ಕುವೆಂಪು ಸಭಾಂಗಣಕ್ಕೆ ಆಗಮಿಸಿ ಜ್ಯೋತಿ ಬೆಳಗುವುದರ ಮೂಲಕ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿದರು.
ಪ್ರಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಸ್ವಾಗತಗೀತೆಯೊಂದಿಗೆ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು.ಇದರೊಂದಿಗೆಕೆಡೆಟ್‌ಜೈರಸ್ ಬಾಬಿಯವರ ನೇತೃತ್ವದತಂಡ ಪ್ರದರ್ಶಿಸಿದ ಸಾಂಪ್ರದಾಯಿಕ ನೃತ್ಯವಾದ‘ಕಂಸಾಳೆ’ ನೃತ್ಯವು ಸಭಿಕರಗಮನ ಸೆಳೆಯಿತು. ನಂತರ ಜಿಲ್ಲಾದಿಕಾರಿಯವರು ಶಾಲೆಯ ವಿವಿಧ ವಿಭಾಗಗಳ ನಾಯಕರಾಗಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳಿಗೆ ಜವಾಬ್ದಾರಿಗಳನ್ನು ವಹಿಸಿದರು.
ಈ ಸಂದರ್ಭದಲ್ಲಿ ಶಾಲೆಯ ನಾಯಕನಾಗಿ ಆಯ್ಕೆಯಾದ ಕೆಡೆಟ್ ಮಾನಸ್ ಕುಮಾರ್ ಹಾಗೂ ವಿವಿಧ ನಿಲಯಗಳ ನಾಯಕರುಗಳು ಶಾಲೆಯ ಧ್ಯೇಯ ವಾಕ್ಯವಾದ ವೀರತೆ, ದೃಢತೆ ಮತ್ತು ಪ್ರಾಮಾಣಿಕತೆಯ ತತ್ವಗಳನ್ನಾಧರಿಸಿ ಶಾಲೆಯ ಎಲ್ಲಾ ನಿಯಮಗಳಿಗೆ ಬದ್ಧರಾಗಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತೇವೆಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಪ್ರಸ್ತುತ ಕಾರ್ಯಕ್ರಮವು ಶಾಲೆಯ ವಿದ್ಯಾರ್ಥಿಗಳಲ್ಲಿ ನಾಯಕತ್ವದಗುಣವನ್ನು ಗುರುತಿಸಿ, ಜವಾಬ್ದಾರಿ, ಶಿಸ್ತು ಮತ್ತು ನಾಯಕತ್ವದ ಅರಿವನ್ನು ಮೂಡಿಸಲು ಸಾಕಾರವಾಗಿದ್ದಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದಕರ್ನಲ್ ಜಿ ಕಣ್ಣನ್, ಆಡಳಿತಾಧಿಕಾರಿಗಳಾದ ವಿಂಗ್‌ಕಮಾAಡರ್ ಪಿ ಪ್ರಕಾಶ್‌ರಾವ್, ಉಪಪ್ರಾಂಶುಪಾಲರಾದ ಸ್ಕಾ÷್ವಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್, ಬೋಧಕ, ಬೋಧಕೇತರ ವರ್ಗ, ಎನ್ ಸಿ ಸಿ ಮತ್ತು ದೈಹಿಕ ಶಿಕ್ಷಕರು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
