
ಉದಯವಾಹಿನಿ ದೇವದುರ್ಗ : ತಾಲೂಕಿನ ಗಬ್ಬೂರು ಹೋಬಳಿಯ ಹಿರೇಬೂದೂರು ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬೂದೆಪ್ಪ ತಂದೆ ಪರಪ್ಪ ಕ್ಯಾದಿಗಿ ಹಾಗೂ ಉಪಾಧ್ಯಕ್ಷರಾಗಿ ಗುಂಡಮ್ಮ ಬಸವರಾಜ ನಾಯಕ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಬಸವರಾಜ ಸಿದ್ದರೂಢ ಅವರು ತಿಳಿಸಿದರು. ನಂತರ 13 ಜನ ಸದಸ್ಯ ಬಲ ಹೊಂದಿದ ಹಿರೇಬೂದೂರು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಭಾಗಿಯಾಗಿದ್ದರು ಎಲ್ಲರ ಒಮ್ಮತದ ಮೇರೆಗೆ ನೂತನವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದರು.ಆಯ್ಕೆಯಾದ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಗ್ರಾಮಸ್ಥರು, ಸರ್ವ ಸದಸ್ಯರು, ಬೆಂಬಲಿಗರು, ಹಿರಿಯರು, ಗ್ರಾ.ಪಂ ಸಿಬ್ಬಂದಿಗಳಿಗೆ ಗೌರವಿಸಿ ಸನ್ಮಾನ ಮಾಡಿದರು. ಅಧಿಕಾರ ಸ್ವೀಕರಿಸಿದ ಗ್ರಾಮ ಪಂಚಾಯತ ನೂತನ ಅಧ್ಯಕ್ಷ ಬೂದೆಪ್ಪ ಕ್ಯಾದಿಗಿ ಮಾತನಾಡಿ ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರನ್ನು ಒಗ್ಗೂಡಿಸಿಕೊಂಡು ಗ್ರಾಮದ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತೇವೆ ಅಲ್ಲದೆ ಜಾತಿ-ಭೇಧ ಮರೆತು ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ ತಾಲ್ಲೂಕಿಗೆ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೈಯದ್ ಫಯಾಜ್ ಖಾಜಿ, ಗ್ರಾ.ಪಂ. ಸದ್ಯಸರು, ಸಿಬ್ಬಂದಿಗಳು ಸೇರಿದಂತೆ ಇನ್ನಿತರ ಅನೇಕ ಬೆಂಬಲಿಗರು ಉಪಸ್ಥಿತಿ ಇದ್ದರು
