ಉದಯವಾಹಿನಿ, ಅಹಮದಾಬಾದ್‌: ಒಟಿಪಿ ಪಡೆದು ಜನರ ಖಾತೆಯಿಂದ ದುಡ್ಡು ಎಗರಿಸುತ್ತಿದ್ದ ವಂಚಕರು ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ವಂಚಕರು ಈಗ ಸಂತ್ರಸ್ತರಿಗೆ ಒಟಿಪಿ ಬಾರದಂತೆ ತಡೆದು, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಸಾಲ ಪಡೆದ ಶಾಕಿಂಗ್‌ ಪ್ರಕರಣ ಬೆಳಕಿಗೆ ಬಂದಿದೆ.
ದೇಶದ ಪ್ರತಿಯೊಬ್ಬ ನಾಗರೀಕನ ಅತ್ಯಂತ ಸುದೃಢ ಗುರುತಿನ ಚೀಟಿ ಎಂದೇ ಪರಿಗಣಿಸಲ್ಪಟ್ಟಿರುವ ಆಧಾರ್ ವ್ಯವಸ್ಥೆಯ ಭದ್ರತೆಯನ್ನೇ ವಂಚಕರು ಕೃತಕ ಬುದ್ಧಿಮತ್ತೆ ಮತ್ತು ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಭೇದಿಸಿದ್ದಾರೆ. ಅಷ್ಟೇ ಅಲ್ಲದೇ ವಂಚಕರು ಅತ್ಯಾಧುನಿಕ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಸಂತ್ರಸ್ತರಿಗೆ ಒಟಿಪಿ ಬಾರದಂತೆ ತಡೆದು ಅವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ.

ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರು ಈ ಹೈಟೆಕ್ ವಂಚಕ ಜಾಲವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನು ಪರ್ಮಾರ್, ಆಶಿಶ್ ವಾಲಂಡ್, ಮೊಹಮ್ಮದ್ ಕೈಫ್ ಪಟೇಲ್ ಮತ್ತು ದೀಪ್ ಗುಪ್ತಾ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಆಧಾರ್‌ ಕಾಮನ್ ಸರ್ವಿಸ್ ಸೆಂಟರ್ (CSC) ಕಿಟ್‌ಗಳನ್ನು ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಈ ಖತರ್ನಾಕ್ ಗ್ಯಾಂಗ್ ಕೇವಲ ತಂತ್ರಜ್ಞಾನವನ್ನಷ್ಟೇ ಅಲ್ಲದೆ ವ್ಯವಸ್ಥೆಯ ಲೋಪದೋಷಗಳನ್ನೂ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿದೆ. ಆರೋಪಿಗಳು ಮೊದಲು ಅಕ್ರಮ ಮೂಲಗಳಿಂದ ಸಂತ್ರಸ್ತ ವ್ಯಕ್ತಿಯ ಆಧಾರ್ ವಿವರಗಳು ಮತ್ತು ಕೇವಲ ಒಂದು ಸ್ಥಿರ ಫೋಟೋವನ್ನು ಪಡೆದುಕೊಳ್ಳುತ್ತಿದ್ದರು.
ಗೂಗಲ್‌ನ ಜೆಮಿನಿ ಎಐ ಟೂಲ್‌ ಬಳಸಿ ಆ ಸ್ಥಿರ ಫೋಟೋವನ್ನು ಜೀವಂತ ಮನುಷ್ಯನಂತೆ ಕಣ್ಣು ಮಿಟುಕಿಸುವ ಮತ್ತು ಮುಖದ ಚಲನೆಯಿರುವ (Eye Blink ಡೀಪ್‌ಫೇಕ್ ವಿಡಿಯೋ ಆಗಿ ಪರಿವರ್ತಿಸುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!