ಉದಯವಾಹಿನಿ , ಹಾಸನ: ಏಳು ತಿಂಗಳ ಹಿಂದೆ ಕ್ಯಾಪ್ಟನ್‌ ಜೊತೆ ಕಾದಾಡುವಾಗ ದಂತ ಮುರಿದುಕೊಂಡಿದ್ದ ಭೀಮಾ (Bhima) ಈಗ ಮತ್ತೆ ಕಾಳಗಕ್ಕೆ ಸಜ್ಜಾಗಿದ್ದಾನೆ. ಕಾಡಾನೆ ಭೀಮ ಹಾಗೂ ಕ್ಯಾಪ್ಟನ್ ಒಟ್ಟಿಗೆ ಕಾಣಿಸಿಕೊಂಡಿವೆ.ಎರಡೂ ಆನೆಗಳು ಕಾದಾಡಲು ಮುಂದಾಗಿದ್ದವು. ಆದರೆ ಜನ ಕಾಣಿಸಿಕೊಂಡಿದ್ದರಿಂದ ಅಲ್ಲಿಂದ ಒಟ್ಟಿಗೆ ನಡೆದುಕೊಂಡು ಹೋಗಿವೆ. ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ ಅಡ್ಡಾಡುತ್ತಿವೆ. ಎರಡೂ ಆನೆಗಳು ಮತ್ತೆ ಕಾದಾಟಕ್ಕೆ ಅಣಿಯಾದಂತೆ ಕಾಣುತ್ತಿವೆ. ಕಳೆದ ನವೆಂಬರ್‌ನಲ್ಲಿ ಕ್ಯಾಪ್ಟನ್ ಜೊತೆಗೆಕಾದಾಡುವಾಗ ಭೀಮ ಒಂದು ದಂತವನ್ನು ಕಳೆದುಕೊಂಡಿದ್ದ. ಇದೀಗ ಮತ್ತೆ ಕಾಡಾನೆಗಳು ಮುಖಾಮುಖಿಯಾಗಿವೆ. ಇದರಿಂದ ಸ್ಥಳೀಯರಲ್ಲಿ, ಕೂಲಿ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ. ಎರಡು ಕಾಡಾನೆಗಳ ಚಲನವಲನಗಳನ್ನು ಇಟಿಎಫ್ ಸಿಬ್ಬಂದಿ ಗಮನಿಸುತ್ತಿದ್ದಾರೆ. 2025ರ ನಂವೆಂಬರ್‌ 9 ರಂದು ಜಗಬೋರನಹಳ್ಳಿ ಗ್ರಾಮದ ಬಳಿ ಭೀಮಾ ಹಾಗೂ ಕ್ಯಾಪ್ಟನ್ ಎದುರಾಗಿ ಭೀಕರ ಕಾಳಗ ನಡೆಸಿದ್ದವು. ಕಾಳಗದ ವೇಳೆ ಸಿಟ್ಟಿನಲ್ಲಿ ಭೀಮಾ ಮರಕ್ಕೆ ಗುದ್ದಿದ್ದ. ಗುದ್ದಿದ ರಭಸಕ್ಕೆ ಭೀಮನ ಒಂದು ದಂತ ಮುರಿದು ಬಿದ್ದಿತ್ತು.

 

Leave a Reply

Your email address will not be published. Required fields are marked *

error: Content is protected !!