ಉದಯವಾಹಿನಿ  : ಇತ್ತೀಚೆಗೆ ಸಾಮಾನ್ಯವಾಗಿ ಮಧುಮೇಹ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಸಮಸ್ಯೆ ಪರಿಣಾಮ ಬೀರಿದ್ದು ಆಹಾರವನ್ನು ಆಯ್ಕೆ ಮಾಡಿ ತಿನ್ನಬೇಕಾಗುತ್ತದೆ. ಅದರಲ್ಲೂ ಭಾರತೀಯ ಊಟಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬೆಳಗ್ಗಿನ ಆಹಾರವಾಗಿ ಇಲ್ಲಿ ಚಿತ್ರಾನ್ನ ಹಾಗೂ ಮೊಸರನ್ನಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. ಆದರೆ ಅಕ್ಕಿಯ ಆಹಾರಗಳ ಸೇವನೆಯೂ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು  ಹೆಚ್ಚಿಸುತ್ತದೆ. ಹಾಗಾದರೆ ಮೊಸರನ್ನ ಅಥವಾ ಚಿತ್ರಾನ್ನ ಇದರಲ್ಲಿ ಯಾವುದರ ಸೇವನೆ ಉತ್ತಮ? ಈ ಬಗ್ಗೆ ತಜ್ಞರ ಸಲಹೆ ಏನು?

ಸಂಶೋಧನೆಯೊಂದರ ವರದಿ ಪ್ರಕಾರ ಸಂಸ್ಕರಿಸಿದ ಬಿಳಿ ಅಕ್ಕಿಯು ಗ್ಲೈಸೆಮಿಕ್ ಪ್ರಮಾಣ ಹೆಚ್ಚು ಹೊಂದಿದೆ ಎಂದು ತಿಳಿಸಿದೆ. ಹೀಗಾಗಿ ಗ್ಲುಕೋಸ್ ಪ್ರಮಾಣ ಏರಿಕೆಯಾಗಿ ಮಧುಮೇಹಿಗಳಿಗೆ ಸಮಸ್ಯೆ ಉಂಟು ಮಾಡಬಹುದು. ಹಾಗಾಗಿ ರಕ್ತದಲ್ಲಿನ ಸಕ್ಕರೆಯ ಸಮಸ್ಯೆಗಳಿರುವ ಜನರಿಗೆ ಮಧ್ಯಮ ಪ್ರಮಾಣದ ಅಕ್ಕಿಯನ್ನು ಸೇವಿಸುವುದು ಉತ್ತಮವಾಗಿದೆ. ಅಕ್ಕಿಯ ಗ್ಲೈಸೆಮಿಕ್ ಪ್ರಮಾಣ ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು ನೀವು ಪ್ರೋಟೀನ್, ಕೊಬ್ಬು ಇತ್ಯಾದಿ ಪೋಷಕಾಂಶವನ್ನು ಹೆಚ್ಚಿಸಬೇಕು.

ಸಂಶೋಧನೆಗಳ ಮಾಹಿತಿಯಂತೆ ಚಿತ್ರಾನ್ನಕ್ಕೆ ಹೋಲಿಕೆ ಮಾಡಿದರೆ ಮೊಸರನ್ನ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ಥಿರವಾಗಿಡುವಲ್ಲಿ ಹೆಚ್ಚು ಪರಿಣಾಮಕಾರಿ. ಮೊಸರನ್ನವನ್ನು ಮಸಾಲೆಗಳು ಮತ್ತು ಕರಿಬೇವಿನ ಎಲೆಗಳ ಜೊತೆಗೆ ಸಂಯೋಜಿಸುವ ಮೂಲಕ ಬೇಯಿಸುತ್ತೇವೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮೊಸರನ್ನು ಸೇರಿಸುವುದರಿಂದ ಪ್ರೋಟೀನ್ ಪ್ರಮಾಣ ಹೆಚ್ಚಾಗುತ್ತದೆ. ಮತ್ತು ಗ್ಯಾಸ್ಟ್ರಿಕ್ ಆಗುವುದನ್ನು ತಡೆಯುತ್ತದೆ. ಇದು ಬೇಸಿಗೆಯ ಶಾಖಕ್ಕೆ ಉತ್ತಮವಾಗಿದೆ.ಚಿತ್ರನ್ನದಲ್ಲಿ ಅಕ್ಕಿಗೆ ನಿಂಬೆ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದು ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿಸಿ ಜೀರ್ಣಕ್ರಿಯೆಯನ್ನು ನಿಧಾನ ಗೊಳಿಸುತ್ತದೆ. ಚಿತ್ರಾನ್ನದಲ್ಲಿ ಎಣ್ಣೆಯ ಪ್ರಮಾಣ ಹೆಚ್ಚಿದ್ದಾಗ ಮತ್ತು ಪ್ರೋಟೀನ್ ಕಡಿಮೆಯಿದ್ದರೆ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು‌.

Leave a Reply

Your email address will not be published. Required fields are marked *

error: Content is protected !!