ಉದಯವಾಹಿನಿ, ಬೆಂಗಳೂರು: ನನಗೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದತ್ತು. ಆದರೆ ಕಾರಾಣಾಂತರಗಳಿಂದ ಆಗ ನಾನು ನೀರಾವರಿ ಮಂತ್ರಿ ಆಗಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶ ಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕು ಅಂದರೆ ಮಾಧ್ಯಮದ ಮುಂದೆ ಹೇಳುವುದಕ್ಕಿಂತ ಅದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೋಗಿ ಹೇಳುವೆ. ನಮ್ಮ ಹೈಕಮಾಂಡ್ ಮುಂದೆ ಹೇಳಬೇಕು, ಅಲ್ಲಿ ಹೇಳುತ್ತೇನೆ. ಕಾಂಗ್ರೆಸ್ ಪಕ್ಷದ ಹಿರಿಯರು ಚರ್ಚೆ ಮಾಡುವಾಗ ನಮ್ಮ ಭಾವನೆ ವ್ಯಕ್ತಪಡಿಸುವೆ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ನನ್ನ ನೇತೃತ್ವದಲ್ಲಿ ಶಾಸಕರು ಗೆದ್ದಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷರು ಸುಪ್ರೀಂ ಹಾಗೂ ಸರ್ಕಾರಕ್ಕೆ ಸಿಎಂ ಸುಪ್ರೀಂ. ಈ ಕುರಿತು ನಾನು ಈಗಾಗಲೇ ಪ್ರತಿಕ್ರಿಯೆ ನೀಡಿರುವೆ. ಸಿಎಂ ಸಿದ್ದರಾಮಯ್ಯನರು, ಡಿಕೆ ಶಿವಕುಮಾರ್ ಅವರು, ಅನೇಕ ಮುಖಂಡರು, ಭೂತ್ ಮಟ್ಟದ ಕಾರ್ಯಕರ್ತರು ಎಲ್ಲ ಕೂಡಿ ದುಡಿದಾಗ ಜನ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ, ಮನಮೋಹಕ ಸಿಂಗ್ ಅವರು ಪ್ರಧಾನಿ ಇದ್ದಾಗ ಪೆಟ್ರೋಲ್ ರೇಟ್ 65 ರೂ. ಇತ್ತು ಆಗ ಇವರು ಟೀಕೆ ಮಾಡುತ್ತಿದ್ದರು. ಈಗ ನೋಡಿದರೆ 105 ರೂ. ಆಗಿದೆ, ಈಗ ಡಿಸೇಲ್ 98 ರೂ. ಆಗಿದೆ, ಅಡುಗೆ ಎಣ್ಣೆ ಈಗ 150 ರೂ. ಆಗಿದೆ ಎಂದು ಬಿಜೆಪಿಗರ ಕಾಲೆಳೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!