ಉದಯವಾಹಿನಿ, ಭಾಗ್ಪತ್ (ಉತ್ತರ ಪ್ರದೇಶ): ನಮ್ಮ ದೇಶದಲ್ಲಿ ಹಸುವನ್ನು ಕೇವಲ ಪ್ರಾಣಿಯಾಗಿ ಕಾಣಲಾಗುವುದಿಲ್ಲ. ಅದು ಕುಟುಂಬದ ಸದಸ್ಯನಂತೆ, ದೈವ ಸ್ವರೂಪಿಯಾಗಿ, ತಾಯಿಯಂತೆ ಗೌರವಿಸಲಾಗುತ್ತದೆ. ಅದೇ ರೀತಿ ಹಸುವನ್ನು ಕಂಡ ಕುಟುಂಬವೊಂದು ಇದೀಗ ತಮ್ಮ ಕುಟುಂಬ ಸದಸ್ಯನಂತಿದ್ದ ಹಸುವನ್ನು ಕಳೆದುಕೊಂಡಿದ್ದು, ಅದಕ್ಕೆ ಕುಟುಂಬ ಸದಸ್ಯರಂತೆ ಅಂತಿಮ ಸಂಸ್ಕಾರವನ್ನು ಸಂಪ್ರದಾಯ ಬದ್ಧವಾಗಿ ನೆರವೇರಿಸಿದ್ದಾರೆ. ಈ ಕುರಿತು ವಿಶೇಷ ವರದಿ ಇಲ್ಲಿದೆ.
ಏನಿದು ಘಟನೆ: ಉತ್ತರ ಪ್ರದೇಶದ ಬಾಗ್‌ಪತ್‌ನ ಕಿಶನ್‌ಪುರ್ ಬರಾಲ್‌ನಲ್ಲಿ ನಿವಾಸಿ ದೇವೇಂದ್ರ ಅವರು 17 ವರ್ಷಗಳ ಹಿಂದೆ ಮನೆಗೆ ಒಂದು ಹೆಣ್ಣು ಕರುವನ್ನು ತಂದಿದ್ದರು. ಈ ಕರುವನ್ನು ತಮ್ಮ ಮನೆಯ ಸದಸ್ಯನಂತೆ ಕಾಣುತ್ತಿದ್ದ ಕುಟುಂಬ ಅದಕ್ಕೆ ನಂದಿನಿ ಎಂದು ನಾಮಕರಣ ಮಾಡಿತು.
ಕುಟುಂಬ ಈ ಕರುವನ್ನು ತಮ್ಮ ಮನೆಯ ಸದಸ್ಯನಂತೆ ಕಂಡಿದ್ದು, ಮನೆಯ ಸದಸ್ಯರೆಲ್ಲರೂ ಅದನ್ನು ಪ್ರೀತಿಯಿಂದ ಆರೈಕೆ ಮಾಡಿದರು. ನಂದಿನಿ ಬೆಳೆದಂತೆ, ಕುಟುಂಬದವರಿಗೆ ಅವಳ ಮೇಲಿನ ಪ್ರೀತಿ ಹೆಚ್ಚಾಯಿತು. ನಂದಿನಿ ಕೇವಲ ಕುಟುಂಬಕ್ಕೆ ಮಾತ್ರವಲ್ಲದೆ ಗ್ರಾಮಸ್ಥರಿಗೆ ತುಂಬಾ ಪ್ರಿಯವಾದ ಹಸುವಾಗಿತ್ತು.
ಮಗುವಾಗಿ ಆಗಮಿಸಿದ ನಂದಿನಿ ನಿಧಾನವಾಗಿ ತಾಯಿಯ ಸ್ಥಾನವನ್ನು ಪಡೆಯಿತು. ಕುಟುಂಬ ಸದಸ್ಯರು ಅದೇ ರೀತಿ ಕಂಡರು. 17 ವರ್ಷಗಳಲ್ಲಿ, ಅವಳು ಒಟ್ಟು 15 ಕರುಗಳಿಗೆ ಜನ್ಮ ನೀಡಿದ್ದಾಳೆ. ಆಕೆಯಿಂದ ಮನೆಯಲ್ಲಿ ಸದಾ ಹಾಲು ತುಂಬಿತು. ದೇವೇಂದ್ರರಿಗಂತೂ ನಂದಿನಿ ಮೇಲೆ ವಿಶೇಷ ಕಾಳಜಿ, ಮಮಕಾರ. ಮನೆಯ ಮೊದಲ ರೊಟ್ಟಿ ನಂದಿನಿಗೆ ಮುಡುಪಾಗಿತ್ತು. ಹೀಗೆ ದಿನ ಕಳೆದಂತೆ ನಂದಿನಿ ಮತ್ತು ಕುಟುಂಬದ ನಡುವಿನ ಬಂಧ ಬಿಡಿಸಲಾಗದ ಅನುಬಂಧವಾಯಿತು.
