ಉದಯವಾಹಿನಿ, ಫರೀದಾಬಾದ್, ಹರಿಯಾಣ: ಇದು ಫರೀದಾಬಾದ್ನ ಸೆಕ್ಟರ್-28ರ ಮಾರ್ಕೆಟ್. ಇಲ್ಲಿ ಸಂಜೆ ಆಗುತ್ತಿದ್ದಂತೆ ‘ವಾಹ್ ತಂದೂರ್’ ಸ್ಟಾಲ್ ನಲ್ಲಿ ಜನರ ಗುಂಪು ಸೇರುತ್ತದೆ. ವಿಶೇಷ ಎಂದರೆ ಈ ಸ್ಟಾಲ್ ಯಾರದ್ದು ಎಂದು ಯಾರಿಗೂ ಊಹಿಸಲು ಸಾಧ್ಯವೇ ಇಲ್ಲ. ಇಲ್ಲಿ ಜನರಿಗೆ ಸವಿರುಚಿಯಾದ ಆಹಾರ ಬಡಿಸುತ್ತಿರುವ ವ್ಯಕ್ತಿ ಲಕ್ಷಾಂತರ ರೂಪಾಯಿ ಪ್ಯಾಕೇಜ್‌ನ ಸಾಫ್ಟ್‌ವೇರ್ ಇಂಜಿನಿಯರ್ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ.
ಇದು ರಚಿತ್ ಮದಾನ್ ಅವರ ಅದ್ಬುತವಾದ ಹಾಗೂ ಯುವಕರಿಗೆ ಮಾದರಿಯಾಗುವ ಕಥೆ. ಅಂದ ಹಾಗೆ ರಚಿತ್ ತಮ್ಮ ಕುಟುಂಬದ ಒತ್ತಾಯದ ಮೇರೆಗೆ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಕುಟುಂಬದ ಆಶಯವನ್ನು ಈಡೇರಿಸಿರುವ ಇವರು ತಮ್ಮೊಳಗಿನ ಅಡುಗೆ ಮಾಡುವ ಹವ್ಯಾಸವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಇಂದು ರಚಿತ್ ದೊಡ್ಡ ಐಟಿ ಕಂಪನಿಯಲ್ಲಿ ಯಶಸ್ವಿ ಕೋಡರ್ ಆಗಿದ್ದಾರೆ. ಇದರೊಂದಿಗೆ ತಮ್ಮ ಬಾಲ್ಯದ ಹವ್ಯಾಸವನ್ನು ಲಾಭದಾಯಕ ವ್ಯಾಪಾರವನ್ನಾಗಿ ಪರಿವರ್ತಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್‌ನ ಫುಡ್ ಸ್ಟಾಲ್: ರಚಿತ್ ಮದಾನ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಅವರು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಲಕ್ಷಾಂತರ ರೂಪಾಯಿ ವೇತನವಿದೆ. ಆದರೂ ಪ್ರತಿ ಸಂಜೆ ಸೆಕ್ಟರ್ 28 ಹುಡಾ ಮಾರ್ಕೆಟ್‌ನಲ್ಲಿ ಫುಡ್ ಸ್ಟಾಲ್ ಇಟ್ಟುಕೊಂಡು ಸವಿರುಚಿಯಾದ ಆಹಾರ ತಯಾರಿಸುತ್ತಾರೆ, ಹಗಲಿನಲ್ಲಿ ಕಂಪನಿಯಲ್ಲಿ ಕೆಲಸ ಮಾಡುವ ಇವರು ಸಂಜೆ ‘ವಾಹ್ ತಂದೂರ್’ ಹೆಸರಿನಲ್ಲಿ ಫುಡ್ ಸ್ಟಾಲ್ ನಡೆಸುತ್ತಾರೆ.
