ಉದಯವಾಹಿನಿ, ವಾಷಿಂಗ್ಟನ್: 33 ವರ್ಷಗಳ ಕಾರ್ಯಾಚರಣೆ ನಂತರ ಯುಎಸ್‌ನ ಸ್ಪಿರಿಟ್ ವಿಮಾನಯಾನ ಸಂಸ್ಥೆ ತನ್ನ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಈ ಕುರಿತು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ನಮ್ಮ ವಿಮಾನಯಾನ ಸೇವೆಗಳನ್ನು ಈಗಿನಿಂದಲೇ ಸ್ಥಗಿತಗೊಳಿಸಲಾಗುವುದು. ನಿಗದಿಯಾಗಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಇನ್ನೂ ಮುಂದೆ ಗ್ರಾಹಕರಿಗೆ ನಮ್ಮ ವಿಮಾನಯಾನ ಸಂಸ್ಥೆಯಿಂದ ಯಾವುದೇ ವಿಮಾನಯಾನ ಸೇವೆ ಲಭ್ಯವಿರುವುದಿಲ್ಲ ಎಂದಿದೆ.

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದ ಟಿಕೆಟ್‌ಗಳಿಗೆ ಮರುಪಾವತಿಯನ್ನು ಮೂಲ ಪಾವತಿ ವಿಧಾನದ ಮೂಲಕ ಮಾಡಲಾಗುವುದು ಎಂದು ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ತಿಳಿಸಿದೆ.
ಯುಎಸ್‌ನಲ್ಲೇ ಅತೀ ಕಡಿಮೆ ಹಾಗೂ ಬಜೆಟ್ ಸ್ನೇಹಿಯಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಸ್ಪಿರಿಟ್ ಏರ್‌ಲೈನ್ಸ್ ಇದೀಗ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಪ್ರಕಾಶಮಾನವಾದ ಹಳದಿ ವಿಮಾನಗಳಿಗೆ ಹೆಸರುವಾಸಿಯಾಗಿದ್ದ ಈ ವಿಮಾನ ಯುನೈಟೆಡ್ ಸ್ಟೇಟ್ಸ್‌ನ ಪ್ರಮುಖ ಏರ್‌ಲೈನ್ಸ್‌ಗಳಲ್ಲಿ ಒಂದಾಗಿತ್ತು. ಒಂದು ಕಾಲದಲ್ಲಿ ವಿಮಾನಯಾನ ಸಂಸ್ಥೆಯು ದಿನಕ್ಕೆ ನೂರಾರು ವಿಮಾನಗಳ ಸೇವೆ ನೀಡುತ್ತಿತ್ತು. ಸುಮಾರು 17,000 ಉದ್ಯೋಗಿಗಳನ್ನು ಹೊಂದಿತ್ತು.

ವರದಿಗಳ ಪ್ರಕಾರ, ಸ್ಪಿರಿಟ್ ವಿಮಾನಯಾನ ಸಂಸ್ಥೆ ತನ್ನ ಸಾಲದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಹಾಗೂ ವ್ಯವಹಾರ ಮುಂದುವರಿಸಲು ಹಣ ಹೊಂದಿಸಲು ತುಂಬಾ ಕಷ್ಟಪಡುತ್ತಿತ್ತು. ಅಲ್ಲದೇ ಕಂಪನಿ ಸ್ಥಗಿತಕೊಳ್ಳುವ ಹಂತಕ್ಕೆ ಬಂದಿತ್ತು. ಆದರೆ ಅದಕ್ಕೆ ಪ್ರತಿಯಾಗಿ ಟ್ರಂಪ್ ಸರ್ಕಾರ ಕಂಪನಿಯನ್ನು ಉಳಿಸಲು ಕೆಲವು ಯೋಜನೆಗಳ ಮೇಲೆ ಕೆಲಸ ಮಾಡುತ್ತಿದೆ. ಅದರಲ್ಲಿ ಸರ್ಕಾರದಿಂದ ಸುಮಾರು 500 ಮಿಲಿಯನ್ ಡಾಲರ್ (50 ಕೋಟಿ ರೂ.) ಸಾಲ ಕೊಡುವ ಯೋಜನೆಯೂ ಇದೆ ಎಂದು ಹೇಳಲಾಗಿದೆ.

ಇತ್ತೀಚಿಗೆ ವಿಮಾನಯಾನ ಸಂಸ್ಥೆಯೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವ ಮಾತನಾಡಿ, ಸರ್ಕಾರ ಕಂಪನಿಯನ್ನು ಉಳಿಸಲು ಬಹಳ ಪ್ರಯತ್ನ ಮಾಡಿತು. ಆದರೆ ಸತ್ತ ದೇಹಕ್ಕೆ ಜೀವ ಕೊಡಲು ಸಾಧ್ಯವಿಲ್ಲ ಎಂಬಂತಿದೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!