ಉದಯವಾಹಿನಿ, ಕಠ್ಮಂಡು: ಜೀಪ್ ಪ್ರಪಾತಕ್ಕೆ ಬಿದ್ದು 20 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದ ರೋಲ್ಪಾದಲ್ಲಿ ನಡೆದಿದ್ದು, ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.
ನೇಪಾಳದ ರೋಲ್ಪಾ ಜಿಲ್ಲೆಯಲ್ಲಿ ಜೀಪ್ ಗುಡ್ಡಗಾಡು ರಸ್ತೆ ಮೂಲಕವಾಗಿ ಸಂಚರಿಸುತ್ತಿತ್ತು. ಜಲ್ಜಲಾ ಪ್ರದೇಶದಲ್ಲಿ ಮಳೆ ಬರುತ್ತಿದ್ದಾಗ ಕೆಸರಿನ ಪ್ರದೇಶದಿಂದ ಜಾರಿ ಸುಮಾರು 700 ಮೀಟರ್ ಆಳದ ಕಂದಕಕ್ಕೆ ಉರುಳಿದೆ. ಪರಿಣಾಮ ಅವಘಡದಲ್ಲಿ ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ (ಮೇ 1) ಬೈಸಖ್ ಪೂರ್ಣಿಮಾ ಆಚರಣೆಯಲ್ಲಿ ಭಾಗವಹಿಸಲು ಸ್ಥಳೀಯರು ಖಾಸಗಿ ಜೀಪನ್ನು ಬಾಡಿಗೆಗೆ ಪಡೆದು ಪ್ರಯಾಣಿಸುತ್ತಿದ್ದರು. ಅದೇ ಜೀಪ್ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ. ಅಪಘಾತದ ಸಮಯದಲ್ಲಿ ವಾಹನದಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ
