ಉದಯವಾಹಿನಿ, ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತೆ ತಾರಕ್ಕೇರುವ ಮುನ್ಸೂಚನೆ ಇದ್ದು ಅಮೆರಿಕ ವಿರುದ್ಧ ಮತ್ತೆ ಇರಾನ್ ಆಕ್ರೋಶ ಹೊರಹಾಕಿದೆ.
ವಾಷಿಂಗ್ಟನ್ ಒಪ್ಪಂದಗಳಿಗೆ ಬೆಲೆ ನೀಡುವುದಿಲ್ಲ. ಅವರ ನಡೆ ಗಮನಿಸಿದರೆ, ಮತ್ತೆ ಯುದ್ಧ ಪುನರಾರಂಭವಾಗುವುದು ಎಂದು ಇರಾನ್ ಮಿಲಿಟರಿ ಪ್ರಧಾನ ಕಚೇರಿಯ ಉಪ ಮುಖ್ಯಸ್ಥ ಮೊಹಮ್ಮದ್ ಜಾಫರ್ ಅಸಾದಿ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಅಧಿಕಾರಿಗಳ ಹೇಳಿಕೆಗಳು ಕೇವಲ ಮಾಧ್ಯಮಗಳ ಮುಂದೆ ಸೀಮಿತವಾಗಿದೆ. ಯಾವುದು ಕೂಡ ಕಾರ್ಯರೂಪವಾಗುತ್ತಿಲ್ಲ. ಅವರ ಮೂಲ ಉದ್ದೇಶ ತಾವು ಸೃಷ್ಟಿಸಿದ ಗೊಂದಲಗಳಿಂದ ಹೊರಬರುವುದು ಬಿಟ್ಟರೆ, ಬೇರೆ ಯಾವ ಒಳಿತನ್ನು ಬಯಸುವುದಿಲ್ಲ ಎಂದು ಟೀಕಿಸಿದರು.
