ಉದಯವಾಹಿನಿ, ಬಾಗಲಕೋಟೆ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 21,866 ಮತಗಳ ಅಂತರಿದಿಂದ ಗೆಲುವು ಸಾಧಿಸಿದ್ದಾರೆ. ಗೆಲುವು ಸಾಧಿಸುತ್ತಿದ್ದಂತೆ ಕೈ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸುತ್ತಿದ್ದಾರೆ.
23 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 87,941 ಮತಗಳ ಪಡೆದಿದ್ದರೆ ಬಿಜೆಪಿ (BJP) ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು 76,075 ಮತ ಪಡೆದ್ದಾರೆ.
2023ರ ಚುನಾವಣೆಯಲ್ಲಿ ಹೆಚ್‌ವೈ ಮೇಟಿ ಅವರು 5,878 ಮತಗಳ ಅಂತರದಿಂದ ಜಯಗಳಿಸಿದ್ದರು. ಹೆಚ್‌ವೈ ಮೇಟಿ ಅವರಿಗೆ 79,336 ಮತಗಳು ಬಿದ್ದಿದ್ದರೆ ಬಿಜೆಪಿಯ ವೀರಣ್ಣ ಚರಂತಿಮಠ ಅವರಿಗೆ 73,458 ಮತಗಳು ಬಿದ್ದಿದ್ದವು.
