ಉದಯವಾಹಿನಿ, ಲುಧಿಯಾನ: ಪಂಜಾಬ್‌ನ ಬಡ ಕುಟುಂಬವೊಂದು ₹1.5 ಕೋಟಿ ಮೌಲ್ಯದ ಲಾಟರಿ ಗೆದ್ದಿದೆ. ಪಠಾಣ್‌ಕೋಟ್‌ನ ಸುಜನ್‌ಪುರದ ಯುವಕ ನರೇಶ್ ಮೆಹ್ರಾ ₹1.5 ಕೋಟಿ ಲಾಟರಿ ಬಹುಮಾನ ಗೆದ್ದ ಯುವಕನಾಗಿದ್ದಾನೆ. ಆ ಯುವಕ ತನ್ನ ವಿಜೇತ ಟಿಕೆಟ್‌ನೊಂದಿಗೆ ಲುಧಿಯಾನಕ್ಕೆ ಪ್ರಯಾಣ ಬೆಳೆಸಿದ್ದು, ವಿಜಯಶಾಲಿ ಕುಟುಂಬಕ್ಕೆ ಅದ್ಧೂರಿ ಸ್ವಾಗತ ದೊರೆತಿದೆ. ಲಾಟರಿ ಗೆದ್ದ ಖುಷಿಗೆ ಕುಟುಂಬದ ಎಲ್ಲ ಸದಸ್ಯರಿಗೆ ಲಡ್ಡು ವಿತರಿಸಿ ಯುವಕ ಸಂಭ್ರಮಿಸಿದ್ದಾನೆ. ಅಷ್ಟೇ ಅಲ್ಲ ಲಾಟರಿ ಗೆದ್ದ ಖುಷಿಗೆ ಡೋಲು ಬಾರಿಸುವ ಮೂಲಕ ನೃತ್ಯ ಮಾಡಿ ಮನೆಮಂದಿಯಲ್ಲ ಖುಷಿ ಪಟ್ಟರು. ಲಾಟರಿ ಗೆದ್ದ ಯುವಕ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಲಾಟರಿ ಗೆದ್ದ ಬಗ್ಗೆ ಮಾತನಾಡಿದ ನರೇಶ್ ಮೆಹ್ರಾ, ನಾನು ಖಾಸಗಿ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತೇನೆ. ನಮ್ಮ ಕುಟುಂಬವು ತುಂಬಾ ಬಡತನದಿಂದ ಕೂಡಿದೆ. ನನ್ನ ತಂದೆ 2020ರಲ್ಲಿ ನಿಧನರಾದರು. ಪ್ರಸ್ತುತ ನನ್ನ ಕುಟುಂಬದಲ್ಲಿ ನಾನು, ನನ್ನ ತಾಯಿ ಮತ್ತು ನನ್ನ ಕಿರಿಯ ಸಹೋದರ ಇದ್ದೇವೆ. ನನ್ನ ಸಹೋದರ ಮತ್ತು ನಾನು ಇಬ್ಬರೂ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಳೆದ ತಿಂಗಳು (ಏಪ್ರಿಲ್) 25 ರಂದು ನಾನು ₹200 ಮೌಲ್ಯದ ಲಾಟರಿ ಟಿಕೆಟ್‌ಗಳನ್ನು ಖರೀದಿಸಿದೆ. ಅದಕ್ಕೂ ಮೊದಲು ನಾನು ಹೋಳಿ ಮತ್ತು ಬೈಸಾಖಿ ಬಂಪರ್ ಲಾಟರಿಗಳಿಗೆ ಟಿಕೆಟ್‌ಗಳನ್ನು ಖರೀದಿಸಿದ್ದೆ. ನಾನು ಲಾಟರಿ ಟಿಕೆಟ್​ ನಿಂದ ಬಹುಮಾನವನ್ನು ಗೆದ್ದಿರುವುದು ಇದು ಮೂರನೇ ಬಾರಿ. ನನ್ನ ಕುಟುಂಬ ಮತ್ತು ನಾನು ತುಂಬಾ ಸಂತೋಷಗೊಂಡಿದ್ದೇವೆ. ಈಗ, ನನ್ನ ಕೆಲಸದ ಬಗ್ಗೆ ನನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ನರೇಶ್ ತಮ್ಮ ಖುಷಿ ಹಂಚಿಕೊಂಡರು.

Leave a Reply

Your email address will not be published. Required fields are marked *

error: Content is protected !!