ಉದಯವಾಹಿನಿ, ಬೆಂಗಳೂರು: ತಮಿಳುನಾಡಿನಲ್ಲಿ ವಿಜಯ್ ಅವರ ತಮಿಳಿ ವೆಟ್ರಿ ಕಳಗಂ ಕಾಂಗ್ರೆಸ್ ಬೆಂಬಲ ನೀಡಿದ್ದನ್ನು ಗೃಹ ಸಚಿವ ಪರಮೇಶ್ವರ್ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಎಷ್ಟು ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಅವರು ಭಾರತದಲ್ಲಿ ಎಲ್ಲೆಲ್ಲಿ ಚೂರಿ ಹಾಕಿದ್ದಾರೆ ಅದನ್ನು ಮರೆತು ಬಿಡುತ್ತಾರೆ. ಬಿಜೆಪಿ ಅವರಿಗೆ ಜಾಣ ಕುರುಡು ಮರೆತು ಹೋಗಿ ಬಿಡುತ್ತಾರೆ ಎಂದು ಕಿಡಿಕಾರಿದರು.
ರಾಜಕೀಯದಲ್ಲಿ ಎಲ್ಲವೂ ಸಾಧ್ಯವಿದೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಯಾಗಬೇಕಿದೆ. ಈ ಕಾರಣಕ್ಕೆ ನಾವು ಬೆಂಬಲ ಕೊಟ್ಟಿದ್ದೇವೆ. ಜನರ ದೃಷ್ಟಿಯಿಂದಾದರೂ ಒಂದು ಸರ್ಕಾರ ಬರಬೇಕು. ಅ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲ ನೀಡಿದೆ ಎಂದು ಸಮರ್ಥಿಸಿಕೊಂಡರು.
ಸುಮಾರು ವರ್ಷಗಳಿಂದ ನಮ್ಮ ದೇಶದಲ್ಲಿ ರಾಜಕೀಯದಲ್ಲಿ ಏನೆಲ್ಲಾ ಆಗಿದೆ ಎನ್ನುವುದನ್ನು ವಿಶ್ಲೇಷಣೆ ಮಾಡಿದರೆ ನಿಮಗೆ ಉತ್ತರ ಸಿಗುತ್ತದೆ. ತಮಿಳುನಾಡಿನಲ್ಲಿ ಡಿಎಂಕೆ- ಕಾಂಗ್ರೆಸ್ ಅಣ್ಣತಮ್ಮಂದಿರ ರೀತಿ ಈಗಲೂ ಇದ್ದೇವೆ. ಯಾರಾದರೂ ಒಬ್ಬರು ಸರ್ಕಾರ ಮಾಡಬೇಕು ಎಂದು ತಿಳಿಸಿದರು.
