ಉದಯವಾಹಿನಿ, ಯಾದಗಿರಿ: ಪ್ರವಾಹ ಎದುರಿಸಿದ್ದ ಕೃಷ್ಣಾ ನದಿಯ ಒಡಲು ಈಗ ರಣ ಬಿಸಿಲಿನಿಂದಾಗಿ ಖಾಲಿಯಾಗಿದೆ.
ಯಾದಗಿರಿ (ಜಿಲ್ಲೆಯ ರೈತರ ಜೀವನಾಡಿ ಕೃಷ್ಣಾ ನದಿ. ಮಳೆಗಾಲದಲ್ಲಿ ಪ್ರವಾಹ ಎದುರಿಸಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಕೃಷ್ಣಾ ನದಿ ಒಡಲು ಬೇಸಿಗೆಯ ರಣ ಬಿಸಿಲಿಯಿಂದ ಖಾಲಿಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಮೌನೇಶ್ವರ ದೇಗುಲ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿದೆ. ಕೃಷ್ಣಾ ನದಿ ತೀರದಲ್ಲಿರುವ ಈ ದೇವಸ್ಥಾನಕ್ಕೆ ಭಕ್ತರು ಆಗಮಿಸಿ, ನದಿಯಲ್ಲಿ ಪುಣ್ಯಸ್ನಾನ ಮಾಡಿ, ಬಳಿಕ ದೇವರ ದರ್ಶನ ಪಡೆಯುತ್ತಾರೆ. ಆದರೆ ಸದ್ಯಕ್ಕೆ ನದಿ ಬತ್ತಿಹೋದ ಕಾರಣ ಭಕ್ತರು ಪುಣ್ಯಸ್ನಾನ ಮಾಡಲು ಪರದಾಡುತ್ತಿದ್ದಾರೆ.
ನೀರು ಕಡಿಮೆಯಾದ್ದರಿಂದ ಮೀನುಗಳ ಕೊರತೆಯುಂಟಾಗಿ ಪಕ್ಷಿಗಳಿಗೆ ಆಹಾರದ ಕೊರತೆ, ಜಾನುವಾರುಗಳಿಗೂ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ನದಿಗೆ ನೀರು ಬಿಡುವಂತೆ ಸ್ಥಳೀಯರು, ಭಕ್ತರು ಆಗ್ರಹಿಸಿದ್ದಾರೆ.
