ಉದಯವಾಹಿನಿ, ಚೆನ್ನೈ: ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಬೆನ್ನಲ್ಲೇ ತಮಿಳುನಾಡಿನಲ್ಲಿ ರೆಸಾರ್ಟ್ ರಾಜಕೀಯ ಆರಂಭವಾಗಿದೆ.
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಶಾಸಕರ ಬೆಂಬಲದ ಪತ್ರ ನೀಡುವಂತೆ ವಿಜಯ್ (Vijay) ಅವರಿಗೆ ಸೂಚಿಸಿದ ಬೆನ್ನಲ್ಲೇ ರೆಸಾರ್ಟ್ ರಾಜಕೀಯ ಗರಿಗೆದರಿದೆ.
ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ತಮ್ಮ ಶಾಸಕರನ್ನು ಸೆಳೆಯಬಹುದು ಎಂಬ ಭೀತಿಯಿಂದ AIADMK ತನ್ನ ಸುಮಾರು 25 ರಿಂದ 40ಕ್ಕೂ ಹೆಚ್ಚು ಶಾಸಕರನ್ನು ಪುದುಚೇರಿಯ ಪೂರನ್‌ಕುಪ್ಪಂನಲ್ಲಿರುವ ಖಾಸಗಿ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.ಮೈತ್ರಿಕೂಟದ ಕುರಿತಾದ ಊಹಾಪೋಹಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಎಐಎಡಿಎಂಕೆ ನಾಯಕ ಅನ್ಬಳಗನ್ ಪ್ರತಿಕ್ರಿಯಿಸಿ, ಚೆನ್ನೈನಲ್ಲಿ ತಾಪಮಾನ ತುಂಬಾ ಹೆಚ್ಚಿರುವುದರಿಂದ ಪಕ್ಷದ ಶಾಸಕರು ಪುದುಚೇರಿಯಲ್ಲಿ ತಂಗಿದ್ದಾರೆ ಎಂದು ರೆಸಾರ್ಟ್‌ಗೆ ತೆರಳಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.ಪುದುಚೇರಿಯ ‘ದಿ ಶೋರ್ ತ್ರಿಶ್ವಂ’ ಸೇರಿದಂತೆ ಪ್ರಮುಖ ರೆಸಾರ್ಟ್‌ಗಳಲ್ಲಿ ಶಾಸಕರಿಗೆ ಸುಮಾರು 74 ಕೊಠಡಿಗಳನ್ನು ಮೇ 13 ರವರೆಗೆ ಕಾಯ್ದಿರಿಸಲಾಗಿದೆ. ಶಾಸಕರ ರಕ್ಷಣೆಗಾಗಿ ಪುದುಚೇರಿ ಪೊಲೀಸರನ್ನು ನಿಯೋಜಿಸಲಾಗಿದೆ.
