ಉದಯವಾಹಿನಿ, ಇಸ್ಲಾಮಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಖೈಬರ್ ಪಸ್ತುಂಖ್ಯಾದ ಲಷ್ಕರ್-ಎ-ತೊಯ್ದಾ (ಎಲ್‌ಇಟಿ) ಉನ್ನತ ಕಮಾಂಡ‌ರ್ ಮತ್ತು ಭಯೋತ್ಪಾದಕ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಆಪ್ತ ಸಹಚರ ಇಸ್ಮಾಯಿಲ್ ಅಹ್ಮದ್ ಆಪರೇಶನ್ ಸಿಂದೂರ ವರ್ಷಾಚರಣೆ ಸಂದರ್ಭದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವುದಾಗಿ ಮೂಲಗಳು ಶುಕ್ರವಾರ (ಮೇ 08) ದೃಢಪಡಿಸಿವೆ.
ಇಸ್ಮಾಯಿಲ್ ಸಾವಿನೊಂದಿಗೆ ಲಷ್ಕರ್ ಇ ತೊಯ್ದಾ ಸಂಘಟನೆಯ ಉಗ್ರರ ಸರಣಿ ಸಾವು ಮುಂದುವರಿದಂತಾಗಿದೆ. ಆದರೆ ಇದು ಭಯೋತ್ಪಾದಕ ಸಂಘಟನೆಯೊಳಗಿನ ದ್ವೇಷದಿಂದ ನಡೆಯುತ್ತಿದೆಯೋ ಅಥವಾ ಪಾಕ್ ಭಯೋತ್ಪಾದಕ ಸಂಘಟನೆ ವಿರುದ್ಧದ ರಹಸ್ಯ ಕಾರ್ಯಾಚರಣೆಯಾಗಿದೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ ಎಂದು ವರದಿ ವಿವರಿಸಿದೆ.
ಇಸ್ಮಾಯಿಲ್ ಅಹ್ಮದ್ ಲಷ್ಕರ್ ಇ ತೊಯ್ದಾ ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಭಾರತದ ವಿರುದ್ಧ ನಡೆದ ಹಲವು ದಾಳಿಯಲ್ಲಿ ಶಾಮೀಲಾಗಿದ್ದ. ಉಗ್ರ ಸಯೀದ್‌ಗೆ ಸಂಬಂಧಿಸಿದ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಪದೇ ಪದೇ ಕರೆ ನೀಡಿದ ನಂತರ ಲಷ್ಕರ್ ಸಂಘಟನೆಯ ಉಗ್ರರ ನಿಗೂಢ ಸರಣಿ ಸಾವು ಸಂಭವಿಸುತ್ತಿರುವುದು ಕಾಕತಾಳೀಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ADVERTISEMENT
ಇಸ್ಮಾಯಿಲ್ ಅಹ್ಮದ್ ನಿಗೂಢ ಸಾವಿನ ಕುರಿತು ಪಾಕ್ ಅಧಿಕಾರಿಗಳು ಈವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಇಸ್ಮಾಯಿಲ್ ಹಣೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ.
2026ರ ಏಪ್ರಿಲ್ ನಲ್ಲಿ ಲಷ್ಕರ್ ಸಂಘಟನೆಯ ಪ್ರಮುಖ ಉಗ್ರ ಶೇಖ್ ಯುಸೂಫ್ ಅಫ್ರಿದಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಮಾರ್ಚ್ ನಲ್ಲಿ ಅಮೀ‌ರ್ ಹಮ್ಮಾನನ್ನು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಕೊಲೆಗೈದಿದ್ದರು. ಬಳಿಕ ಬಿಲಾಲ್ ಅರೀಫ್ ಸರಾಫಿಯನ್ನು ಮರ್ಕಾಝ್ ತೈಬಾ ಕೇಂದ್ರ ಕಚೇರಿಯೊಳಗೆ ಗುಂಡು ಹೊಡೆದು ಹತ್ಯೆಗೈಯಲಾಗಿತ್ತು. 2023ರಿಂದ ಈವರೆಗೆ 30ಕ್ಕೂ ಅಧಿಕ ಲಷ್ಕರ್ ಮತ್ತು ಹಿಬ್ಬುಲ್ ಮುಜಾಹಿದೀನ್ ಉಗ್ರರು ನಿಗೂಢವಾಗಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!