ಉದಯವಾಹಿನಿ, ವಿಚ್ಛೇದನದ ಹಾದಿಯಲ್ಲಿರುವ ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ತನ್ನ ಮಗನ ಸಮಾಧಿಯನ್ನು ಸ್ವಚ್ಛಗೊಳಿಸುತ್ತಾ ಕಣ್ಣೀರಿಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸೆಲೀನಾ ಜೇಟ್ಲಿ ಮತ್ತು ಅವರ ಪತಿ ಪೀಟರ್ ಹಾಗ್ ನಡುವಿನ ವಿಚ್ಛೇದನ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಬಹಳ ದಿನಗಳೇ ಆಯಿತು. ಆದರೆ ಆಸ್ಟ್ರಿಯಾದಲ್ಲಿ ನೆಲೆಸಿರುವ ತಮ್ಮ ಪತಿ ತನ್ನ ಮಕ್ಕಳನ್ನು ಭೇಟಿ ಮಾಡಲು ಬಿಡುತ್ತಿಲ್ಲ. ತನ್ನ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ಗಂಭೀರ ಆರೋಪ ಮಾಡಿದ್ದಾರೆ.
ವಿಚ್ಛೇದನ ವಿಚಾರಣೆಗಾಗಿ ನಟಿ ಸೆಲೀನಾ ಆಸ್ಟ್ರಿಯಾ ದೇಶಕ್ಕೆ ತೆರಳಿದ್ದರು. ಆದರೆ, ನಟಿಯ ಗಂಡ ಪೀಟರ್ ಮಕ್ಕಳನ್ನು ನೋಡಲು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ಮನನೊಂದು ಅವರು ಕೊನೆಗೆ ಸ್ವಲ್ಪ ಕಾಲದ ಹಿಂದೆ ನಿಧನವಾಗಿದ್ದ ತಮ್ಮ ಪುಟ್ಟ ಮಗ ಶಂಶೇರ್‌ನ ಸಮಾಧಿಯನ್ನು ನೋಡಲು ಹೋಗಿದ್ದಾರೆ.
ಈ ಸಂಕಷ್ಟದ ಸಂದರ್ಭದಲ್ಲಿ ಮಗನ ಸಮಾಧಿಯನ್ನು ಸ್ವಚ್ಛಗೊಳಿಸುತ್ತಾ ಭಾವುಕರಾಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಒಬ್ಬ ತಾಯಿಯಾಗಿ ನನ್ನ ನೋವನ್ನು ಜಗತ್ತಿಗೆ ತೋರಿಸಲು ಇದೊಂದೇ ದಾರಿ ಉಳಿದಿದೆ” ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
