ಉದಯವಾಹಿನಿ, ಚಾಮರಾಜನಗರ: ನಾಗಮಲೆಗೆ ಪಾದಯಾತ್ರೆ ಹೋಗುತ್ತಿದ್ದ ಬೆಂಗಳೂರು ಮೂಲದ ಬಾಲಕನನ್ನು ಚಿರತೆ ಪೋಷಕರ ಕಣ್ಣೆದುರಲ್ಲೇ ಎಳೆದೊಯ್ದು ಕೊಂದು ಹಾಕಿದ ಘೋರ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಬಳಿ ನಡೆದಿದೆ. ಮೃತ ಬಾಲಕನನ್ನು ಬೆಂಗಳೂರಿನ ಲಗ್ಗೆರೆ ನಿವಾಸಿ ಹರ್ಷಿತ್ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಕುಟುಂಬದ 10 ಮಂದಿ ಸದಸ್ಯರೊಂದಿಗೆ ಹರ್ಷಿತ್ ನಾಗಮಲೆ ಹಾದಿಯಲ್ಲಿ ತೆರಳುತ್ತಿದ್ದಾಗ, ಇಂಡಿಗನತ್ತ ಸಮೀಪ ಚಿರತೆ ದಾಳಿ ಮಾಡಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಚಿರತೆ ಎಳೆದೊಯ್ದಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ, ಅರಣ್ಯದೊಳಗೆ ಬಾಲಕನ ಶವ ಪತ್ತೆಯಾಗಿದೆ. ಬಾಲಕನ ಕುಟುಂಬಸ್ಥ ಆಕ್ರಂದನ ಮುಗಿಲು ಮುಟ್ಟಿದೆ.
ಬಾಲಕನ ಪೋಷಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಾವು ನಾಗಮಲೆಗೆ ದೇವರ ದರ್ಶನಕ್ಕೆ ಹೋಗ್ತಿದ್ದೆವು. ಪ್ರಾಣಿಗಳು ಇರುವ ಬಗ್ಗೆ ನಮಗೆ ಯಾರೂ ಕೂಡ ಮಾಹಿತಿ ಕೊಟ್ಟಿಲ್ಲ. ನಮ್ಮ ಜೊತೆಗೆ ಯಾವ ಅರಣ್ಯ ಸಿಬ್ಬಂದಿ ಕೂಡ ಇರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!