ಉದಯವಾಹಿನಿ,ವಾಷಿಂಗ್ಟನ್‌: ಪಾಕಿಸ್ತಾನವು ಒಂದು ಕಡೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಾ, ಇನ್ನೊಂದೆಡೆ ಇರಾನ್‌ಗೆ ಗುಪ್ತವಾಗಿ ಬೆಂಬಲ ನೀಡಿದ ವಿಚಾರ ಈಗ ಬೆಳಕಿಗೆ ಬಂದಿದೆ. ಪಾಕಿಸ್ತಾನವು ಇರಾನ್‌ನ ಮಿಲಿಟರಿ ವಿಮಾನಗಳನ್ನು ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಲ್ಲಿನಿಲ್ಲಿಸಲು ರಹಸ್ಯವಾಗಿ ಅವಕಾಶ ಮಾಡಿಕೊಟ್ಟಿದೆ ಅಮೆರಿಕದ CBS News ವರದಿ ಮಾಡಿದೆ.
ಏಪ್ರಿಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್‌ನಲ್ಲಿ ಇರಾನ್ ಜೊತೆ ಕದನ ವಿರಾಮ ಘೋಷಿಸಿದ ಕೆಲವೇ ದಿನಗಳಲ್ಲಿ, ಇರಾನ್ ತನ್ನ ಹಲವು ಮಿಲಿಟರಿ ವಿಮಾನಗಳನ್ನು ಪಾಕಿಸ್ತಾನದ ಈ ವಾಯುನೆಲೆಗೆ ಸ್ಥಳಾಂತರಿಸಿದೆ ಎದು ವರದಿಯಾಗಿದೆ.
ಅಮೆರಿಕದ ಸಂಭಾವ್ಯ ವೈಮಾನಿಕ ದಾಳಿಗಳಿಂದ ತನ್ನ ಮಿಲಿಟರಿ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ಇರಾನ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ವಿಮಾನಗಳಲ್ಲಿ ಇರಾನ್ ವಾಯುಪಡೆಯ RC-130 ವಿಚಕ್ಷಣಾ ವಿಮಾನವೂ ಸೇರಿದೆ.

Leave a Reply

Your email address will not be published. Required fields are marked *

error: Content is protected !!