ಉದಯವಾಹಿನಿ ಕೆ0ಭಾವಿ : ಸಮೀಪದ ಯಾಳಗಿ ಗ್ರಾಮದ ಶಾದಿಮಹಲ್ ಆವರಣದಲ್ಲಿ ಆಯೋಜಿಸಲಾಗಿದ್ದ ಹತ್ತನೇ ತರಗತಿಯಲ್ಲಿ 90% ಕ್ಕಿಂತ ಹೆಚ್ಚಿನ ಅಂಕ ಪಡೆದ ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಇದೇ ವೇಳೆ ರಾಜ್ಯಕ್ಕೆ ತೃತಿಯ ಸ್ಥಾನ ಪಡೆದುಕೊಂಡು ಯಾಳಗಿ ಗ್ರಾಮದ ಸ್ವರ್ಣಗೌರಿ ಹಳಿಮನಿ ಎಂಬ ವಿಧ್ಯಾರ್ಥಿನಿಯನ್ನು ವಿಶೇಷ ಸನ್ಮಾನ ಮಾಡಲಾಯಿತು ನಂತರ ಮಾತನಾಡಿದ ಶಾಲಾ ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷ ಬಸವರಾಜ ಹೆಳವರ ಮಾತನಾಡುತ್ತಾ ಓದುವದು ಶಾಲೆಗೆ ಬರುವದು ತಮ್ಮ ಕಲಿಕೆಯಿಂದ ಶಾಲೆಗೆ ಗ್ರಾಮಕ್ಕೆ ಉತ್ತಮ ಹೆಸರು ತರುವಂತವರಾಗಬೇಕು ಒಳ್ಳೆಯ ಸಂಸ್ಕಾರವ0ತರಾಗಿ ಶಾಲೆಯಲ್ಲಿ ನಯ ವಿನಯದಿಂದ ನಿಮ್ಮ ಜೀವನ ಸುಂದರವಾಗಿಸಿಕೊಳ್ಳಬೇಕು ಅಂದಾಗ ವಿದ್ಯೆ ನಿಮ್ಮ ಬಾಳಿಗೆ ಬೆಳಕಾಗುತ್ತದೆ ಎಂದು ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷ ಬಸವರಾಜ ಹೆಳವರ ಹೇಳಿದರು.
ಶಿಕ್ಷಣ ಪ್ರೇಮಿ ಹಾಗೂ ಪಶು ವೈದ್ಯಾಧಿಕಾರಿಗಳಾದ ಪರ್ವತರಡ್ಡಿ ಗೊರಗೋರಿ ಮಾತನಾಡುತ್ತಾ ನಾನು ಕಲಿತ ಶಾಲೆಯಲ್ಲಿ ನನ್ನ ಮಗಳಿಗೆ ಸನ್ಮಾನ ಮಾಡುತ್ತಿರುವುದು ನಿಜಕ್ಕೂ ನನಗೂ ಹೆಮ್ಮೆ ತಂದಿದೆ ವಿಧ್ಯಾರ್ಥಿಗಳ ಜೀವನದಲ್ಲಿ ಪೋಷಕರು ಕೂಡ ಪ್ರಮುಖ ಪಾತ್ರ ವಹಿಸಬೇಕು ಮಗುವಿನ ಚಲನವಲನದ ಬಗ್ಗೆ ಗಮನವಹಿಸಿದ್ರೆ ನಿಶ್ಚಳವಾಗಿ ಸಾಧನೆ ಮಾಡುವ ಹುಮಸ್ಸು ಮಕ್ಕಳಲ್ಲಿ ಮೂಡಿ ಉತ್ತಮ ಅಂಕದ ಮೂಲಕ ರಾಜ್ಯಕ್ಕೆ ಹೆಸರು ತರುತ್ತಾರೆ ಆ ಸಾದನೆ ಇಂದು ಈ ಶಾಲೆ ಮಾಡಿದೆ ಎಂದರು .
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಉತ್ತಮ ಸಾದನೆ ಮಾಡಿದ ಸಂಧ್ಯಾ ಸಿದ್ರಾಮಯ್ಯ ಜಂಗಿನಮಠ ,ರೇಣುಕಾ .ಪ.ಗೊರಗೋರಿ,ಸ್ವರ್ಣಗೌರಿ,ಶಿವರಾಜ ಹಳಿಮನಿ,ಪ್ರಭುಗೌಡ ಮಾಲಿಪಾಟೀಲ,ಪರಹಾನ್ ಮಲಿಕ್ ಅಪರಾದ ವಿಶೇಷವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬಸನಗೌಡ ಹೊಸಮನಿ ( ರಾಜುಕಾಕಾ) ಶ್ರೀನಿವಾಸರಡ್ಡಿ ಮಾಲಿಪಾಟೀಲ,ಶಿವನಗೌಡ ಬಿರಾದರ್ ,ರಾಮನಗೌಡ ಡವಳಗಿ,ಮಹೇಶ ಹುಜರತ್ತಿ,ವಿಜಯಕುಮಾರ ಇಂಡಿ, ಶಾಂತಗೌಡ ಹಳಿಮನಿ,ಬಸವರಾಜ ಹೆಳವರ,ಅಶೋಕ ಮಾಲಿಪಾಟೀಲ,ಅಬ್ದುಲ್ ಸಿಪಾಯಿ,ರಾಮನಗೌಡ,ಮಲ್ಲು ಸಜ್ಜನ ,ಬೀರಪ್ಪ ಕಟ್ಟಿಮನಿಶಿವಶರಣಪ್ಪ ಶಿರೂರ ನಿರೂಪಿಸಿದರು ಮಾನಸ ಸ್ವಾಗತಿಸಿದರು ಹಾಗೂ ಶಿಕ್ಷಕರು ಹಾಗೂ ಶಾಲಾಮಕ್ಕಳ ಗ್ರಾಮಸ್ಥರು ಭಾಗವಹಿಸಿದ್ರೂ

 

Leave a Reply

Your email address will not be published. Required fields are marked *

error: Content is protected !!