ಉದಯವಾಹಿನಿ ದೇವರಹಿಪ್ಪರಗಿ: ತಾಯಿಯ ಎದೆಹಾಲು ಅಮೃತವಷ್ಟೆ ಸಮಾನ. ತಾಯಿ, ತಂದೆ ಕುಟುಂಬ ಸ್ತನ್ಯಪಾನವನ್ನು ಪ್ರೋತ್ಸಾಹಿಸಬೇಕೆಂದು ಸಮುದಾಯ ಆರೋಗ್ಯ ಅಧಿಕಾರಿ ದಾನಮ್ಮ ಹಿರೇಮಠ ಹೇಳಿದರು.
ಪಟ್ಟಣದ ಸಮೀಪವಿರುವ ಪಡಗಾನೂರ ಎಲ್ ಟಿ ಗ್ರಾಮದಲ್ಲಿ ಗುರುವಾರದಂದು ವಿಶ್ವ ಸ್ತನ್ಯಪಾನ ಸಪ್ತಾಹದ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಶಿಶುವು ಸಂಪೂರ್ಣ ವಿಕಾಸ ಹೊಂದಿ ನ್ಯೂಮೋನಿಯಾ, ಅತಿಸಾರ ಭೇದಿ, ಅಪೌಷ್ಟಿಕತೆ ಹಾಗೂ ಹಲವಾರು ಕಾಯಿಲೆಗಳಿಂದ ಸಂರಕ್ಷಿಸಿಲು ಶಿಶುವಿಗೆ ಹುಟ್ಟಿದ ತಕ್ಷ ಣದಿಂದ 6 ತಿಂಗಳವರೆಗೆ ತಾಯಿಯ ಎದೆಹಾಲನ್ನು ಮಾತ್ರ ಕುಡಿಸಬೇಕು. ಇದರಿಂದ ಶಿಶುವು ದೈಹಿಕವಾಗಿ, ಬೌದ್ಧಿಕವಾಗಿ ಸರ್ವತೋಮುಖ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ಪ್ರಸವಪೂರ್ವ ತಾಯಿಯ ಅಂದಿರಾ(ಗರ್ಭಿಣಿ )ಆರೋಗ್ಯ ತಪಾಸಣೆ ಹಾಗೂ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಮಾಡಿ ಅರಿವು ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಕೆಎಚ್ ಪಿ ಟಿ ಕೋ ಆರ್ಡಿನೇಟರ್ ಶ್ರೀಮತಿ ಅಂಜನಾ ಹೂಗಾರ, ಆಶಾ ಕಾರ್ಯಕರ್ತೆ ಇಂದುಮತಿ ರಾಠೋಡ ಗ್ರಾಮ ಪಂಚಾಯತಿಯ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ,ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!