
ಉದಯವಾಹಿನಿ ಪೀಣ್ಯ ದಾಸರಹಳ್ಳಿ : ಕ್ಷೇತ್ರದ ಚಿಕ್ಕಬಾಣವಾರ ಪುರಸಭೆ ವ್ಯಾಪ್ತಿಗೆ ಬರುವ ಚಿಕ್ಕಬಾಣವಾರ ರೈಲ್ವೆ ಸ್ಟೇಷನ್ ಹತ್ತಿರ ಹೆಸರಘಟ್ಟ ಮುಖ್ಯರಸ್ತೆಯ ಅಂಡರ್ ಪಾಸ್ ಕಾಂಕ್ರೀಟ್ ರಸ್ತೆಗೆ ಕ್ಷೇತ್ರದ ಶಾಸಕ ಎಸ್.ಮುನಿರಾಜು ಅವರು ರಿಬ್ಬನ್ ಕತ್ತರಿ ಉದ್ಘಾಟಿಸಿದರು. ನಂತರ ಅವರು ಸಾರ್ವಜನಿಕರಿಗೆ ವಾಹನ ಸವಾರರಿಗೆ ಮತ್ತು ಇತರರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಶಾಸಕ ಎಸ್ ಮುನಿರಾಜು ಸಾರ್ವಜನಿಕರನ್ನು ಮನವರಿಕೆ ಮಾಡಿ ಮಾತಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕ್ಷೇತ್ರದ ಬಿಜೆಪಿ ಪ್ರಭಾವಿ ಮುಖಂಡ ಜಿ.ಮರಿಸ್ವಾಮಿ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಶಕ್ತಿಕೇಂದ್ರ ಅಧ್ಯಕ್ಷ ಗಿರೀಶ್, ಜನಾರ್ದನ್, ಉಮೇಶ್, ಬಿಜೆಪಿ ಯುವ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿ ಮರಿಸ್ವಾಮಿ ಅವರ ಸುಪುತ್ರ ಅಭಿಲಾಷ್ ಮರಿಸ್ವಾಮಿ, ಅಲ್ಪಸಂಖ್ಯಾತರ ಮೋರ್ಚಾ ಮುಖಂಡ ಕಬೀರ್ ಆಹ್ಮದ್, ಬಿಜೆಪಿ ಹಿರಿಯ ನಾಯಕಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಭಾಗ್ಯಮ್ಮ ಬಾಣವಾರ, ಸೇರಿದಂತೆ ಸಾರ್ವಜನಿಕರು ಮಹಿಳಾ ಮುಖಂಡರು ಸಾರ್ವಜನಿಕರು ಮುಂತಾದವರು ಇದ್ದರು.
