ಉದಯವಾಹಿನಿ, ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು ನೀಟ್ ಬಗ್ಗೆ ಮಾತಾಡಲಿ, 25 ಲಕ್ಷ ಮಕ್ಕಳ ಕಾಲಡಿಗೆ ನುಸುಳಿ ಬರಲಿ ಆಗ ಈ ಆದೇಶದ ಬಗ್ಗೆ ಉತ್ತರಿಸ್ತಿನಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ಹೊರಹಾಕಿದ್ದಾರೆ.ಹಿಜಬ್‌ಗೆ ಶಾಲಾ-ಕಾಲೇಜುಗಳಲ್ಲಿ ಅವಕಾಶ ಕೊಟ್ಟಿದ್ದನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಂಡು ಅಲ್ಪಸಂಖ್ಯಾತರ ಓಲೈಸಲು ಮಾಡಿದ್ದಾರೆ ಎಂಬ ಆರೋಪದ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಹಿಜಬ್ ಮಾತ್ರ ಅಲ್ಲ. ಇದಕ್ಕೂ ಮುನ್ನ ನಾನು ಶಿವದಾರ ಹಾಗೂ ಜನಿವಾರದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೆ, ಹಾಗಾದ್ರೆ ಇವರೆಲ್ಲ ಅದರ ವಿರೋಧಿಗಳಾ?, ಕಣ್ಣಿಗೆ ಇದೊಂದೇ ಕಾಣಿಸುತ್ತಾ? ಇದರ ಬಗ್ಗೆ ಮಾತಾಡೋರು ನೀಟ್ ಪರೀಕ್ಷೆ ಬಗ್ಗೆ ಮಾತಾಡಲಿ. ನೀಟ್ ಪಶ್ನೆಪತ್ರಿಕೆ ಲೀಕ್‌ನಿಂದಾಗಿ 25 ಲಕ್ಷ ಮಕ್ಕಳನ್ನು ಬೀದಿಗೆ ತಂದಿದ್ದಾರಲ್ಲ, ಅವರ ಕಾಲಡಿಗೆ ನುಸುಳಿ ಬರಲಿ, ಆಗ ಈ ಆದೇಶದ ಬಗ್ಗೆ ಉತ್ತರ ಕೊಡುತ್ತೇನೆಂದು ಕಿಡಿಕಾರಿದ್ದಾರೆ.
