
ಉದಯವಾಹಿನಿ ದೇವದುರ್ಗ : ತಾಲೂಕಿನ 24 ಸದಸ್ಯರನ್ನು ಒಳಗೊಂಡ ಮಸರಕಲ್ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ನಡೆದ ಜಿದ್ದಾ ಜಿದ್ದಿ ಚುನಾವಣೆಯಲ್ಲಿ ನೂರಜಾಹಾನ್ ಬೇಗಂ ಗಂಡ ಮಹಮ್ಮದ್ ಸಾಬ್ ಇವರು 21 ಮತ ಪಡೆದು ಪ್ರತಿಸ್ಪರ್ದಿ ಖಾಜಾ ಬೇಗಂ ಗಂಡ ಸಯ್ಯದ್ ಫಾರುಖ್ ಇವರಿಗೆ 3 ಮತಗಳನ್ನು ಬಿಟ್ಟು ಕೊಡುವ ಮೂಲಕ ಭರ್ಜರಿ ಜಯಭೇರಿ ಸಾಧಿಸಿದ್ದಾರೆ. ಹಾಗೂ ಉಪಾಧ್ಯಕ್ಷರಾಗಿ ರಂಗಮ್ಮ ಗಂಡ ತಿಪ್ಪಣ್ಣ ಮಿಯಾಪೂರ ರವರು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಅಕ್ಷರ ದಾಸೋಹ ನಿರ್ದೇಶಕ ಬಂದೋಲಿ ರವರು ತಿಳಿಸಿದ್ದಾರೆ.ಆಯ್ಕೆಯಾದ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು ಅಧಿಕಾರವನ್ನು ಸ್ವೀಕರಿಸಿದ ಗ್ರಾಮ ಪಂಚಾಯತ ನೂತನ ಅಧ್ಯಕ್ಷ ನೂರಜಾಹಾನ್ ಬೇಗಂ, ಮಾತನಾಡಿ ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರನ್ನು ಒಗ್ಗೂಡಿಸಿಕೊಂಡು ಗ್ರಾಮದ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತೇವೆ ಅಲ್ಲದೆ ಜಾತಿ-ಭೇಧ ಮರೆತು ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ ಇನ್ನೂ ನಮ್ಮ ಮಸರಕಲ್ ಗ್ರಾಮ ಪಂಚಾಯತಿಯನ್ನು ತಾಲ್ಲೂಕಿಗೆ ಮಾದರಿಯ ಗ್ರಾಮಪಂಚಾಯತಿಯನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಆದಿ,ಗ್ರಾ.ಪಂ. ಸದ್ಯಸರು, ಸಿಬ್ಬಂದಿಗಳು ಸೇರಿದಂತೆ ಇನ್ನಿತರ ಅನೇಕ ಬೆಂಬಲಿಗರು ಉಪಸ್ಥಿತಿ ಇದ್ದರು…
