
ಉದಯವಾಹಿನಿ,ಶಿಡ್ಲಘಟ್ಟ : ಸುಮಾರು ಒಂದು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ನರಸಿಂಹಮೂರ್ತಿ ಕುಟುಂಬ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ ಇಂತಹ ವ್ಯಕ್ತಿಯ ಕುಟುಂಬಕ್ಕೆ ನಾವು ನೆರವಾಗಬೇಕು ಎಂದು ಸಮಾಜ ಸೇವಕ ಆಂಜಿನಪ್ಪ ಪುಟ್ಟು ತಿಳಿಸಿದರು.
ನಗರದ ವಾರ್ಡ್ ನಂ 06 ಕುರುಬರ ಪೇಟೆಯ ನರಸಿಂಹಮೂರ್ತಿ ಅವರ ಮನೆಗೆ ಬೇಟಿ ನೀಡಿ ಅವರಿಗೆ ಧನಸಹಾಯ ಮಾಡಿ ಮಾತನಾಡಿ, ನಾನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿ ಕುದ್ದಾಗಿ ಅವರಿಗೆ ನೆರವು ಮಾಡಿದ್ದೇನೆ ಭಗವಂತನ ಕೃಪೆಯಿಂದ ಬೇಗ ಗುಣಮುಖರಾಗಿ ಸಾಮಾನ್ಯರಾಗಿ ಬದಕು ರೂಪಿಸಿಕೊಳ್ಳಬೇಕು.
ಮಕ್ಕಳಿಲ್ಲದ ಮನೆಗೆ ಯಾವುದೇ ಆದಾರಸ್ತಂಭವಿಲ್ಲದ ನರಸಿಂಹಮೂರ್ತಿ ಹಾಗೂ ಪದ್ಮಮ್ಮ ವೃದ್ಧ ದಂಪತಿಗಳು ಸಂಕಷ್ಟಕ್ಕೆ ಸಿಲುಕಿಕೊಂಡು ಬಾಡಿಗೆಯ ಮನೆಯಲ್ಲಿ ವಾಸಿಸುತ್ತಿದ್ದು, ಬೀದಿಪಾಲಾಗುವ ಸಾಧ್ಯತೆಗಳಿವೆ,ಆದ್ದರಿಂದ ಯಾರಾದರೂ ನೆರವು ನೀಡಿದರೆ ಅವರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಅದೇ ಸಮಯದಲ್ಲಿ ಕ್ಯಾನ್ಸರ್ ಪೀಡಿತ ವ್ಯಕ್ತಿ ಶ್ರೀನಾಥ್ ಹಾಗೂ ಸೌಮ್ಯ ಡಯಾಲಿಸೀಸ್ ನಿಂದ ಕೊರಗುತ್ತಿದ್ದು ಅವರಿಗೂ ಸಹ ಧನಸಹಾಯ ನೀಡಿ ಬೇಗ ಗುಣಮುಖವಾಗಲಿ ಎಂದು ಅವರಿಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆನೂರು ದೇವರಾಜ್,ಕಲಾವಿದ ಸಿ.ಎನ್ ಮುನಿರಾಜು,ಅಪ್ಸರ್ ಪಾಷ, ಮದನ್ ಮುಂತಾದವರು ಹಾಜರಿದ್ದರು.
