
ಉದಯವಾಹಿನಿ ಕೋಲಾರ :- ತಮ್ಮ ಮಾತಿನಿಂದಲೇ ಪ್ರಖ್ಯಾತಿ ಪಡೆದಿರುವ ಹಾಗೂ ಅನೇಕ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿ ವಯೋನಿವೃತ್ತರಾದ ಮುಖ್ಯಶಿಕ್ಷಕರಾದ ಶ್ರೀಯುತ ಬಿ.ಶ್ರೀನಿವಾಸ್ ರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀಯುತ ಗೋವಿಂದ ರವರು ಮಾತನಾಡಿ ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಸಮಾನಂತರವಾಗಿ ವಿದ್ಯೆಯನ್ನು ಕಲಿಸುವವರೇ ಗುರು ಎಂದು ತಿಳಿಸಿದರು.ತಾಲೂಕಿನ ನರಸಾಪುರ ಹೋಬಳಿಗೆ ಸೇರಿದ ಬೆಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ನರಸಾಪುರ ಗ್ರಾಮದ ಮುಖ್ಯ ಶಿಕ್ಷಕ ಬಿ ಶ್ರೀನಿವಾಸರನ್ನು ಸನ್ಮಾನಿಸಿ ಮಾತನಾಡಿದರು.ನಮ್ಮ ಪ್ರಾಚೀನ ಕಾಲದಿಂದಲೂ ಗುರುವಿಗೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದು, ಹೆತ್ತವರ ನಂತರ ಗುರುವನ್ನು ದೇವರೆಂದು ಪರಿಗಣಿಸಲಾಗುತ್ತಿದೆ. ಮನುಷ್ಯನು ಈ ಜಗತ್ತಿನಲ್ಲಿ ಅಜ್ಞಾನದ ರೂಪದಲ್ಲಿ ತೊಳಲಾಡುತ್ತಿರುವಾಗ ಭಗವಂತನು ಗುರುವಿನ ರೂಪದಲ್ಲಿ ಕಾಣಿಸಿಕೊಂಡನು, ಗುರುಗಳಾದವರು ತಮ್ಮ ಶಿಷ್ಯರಿಂದ ಭಕ್ತಿ ಮತ್ತು ಗೌರವಗಳನ್ನು ಅಪೇಕ್ಷಿಸಬಾರದು, ತಮ್ಮ ಯೋಗ್ಯತೆಯಿಂದಲೇ ಅವನು ಪಡೆಯಬೇಕು.ಅಧಿಕಾರಕ್ಕೆ ಅಂತಸ್ತಿಗೆ ಹೆದರಿ ನೀಡುವ ಗೌರವಗಳು ಶಾಶ್ವತವಲ್ಲ, ಸುಮಾರು 41 ವರ್ಷಗಳ ಕಾಲ ಶಿಕ್ಷಕ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅನೇಕ ದಾನಿಗಳಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸುವುದೇ ಇವರ ಮುಖ್ಯ ಕರ್ತವ್ಯವಾಗಿತ್ತು ಇದರ ಜೊತೆಗೆ ತಾವು ಕಾರ್ಯನಿರ್ವಹಿಸುವ ಶಾಲೆಗೆ ಜನಪ್ರತಿನಿಧಿಗಳಿಂದ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ಮಹತ್ವವಾದ ಪಾತ್ರವನ್ನು ವಹಿಸಿರುತ್ತಾರೆ ಎಂದರು.ಈ ಸಂದರ್ಭದಲ್ಲಿ ಶಿಕ್ಷಕ ವೃಂದವಾದ ಸುವರ್ಣ ಕುಮಾರಿ, ಸುಜಾತಮ್ಮ, ಕೃಷ್ಣವೇಣಿ, ಈಶ್ವರ ಚಾರಿ, ಸೋಮೇಗೌಡ, ಕೃಷ್ಣಪ್ಪ , ಇಲಾಖಾ ಅಧಿಕಾರಿಗಳು, ಗ್ರಾಮದ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರುಗಳು, ಸಹಪಾಠಿಗಳು, ಶಿಷ್ಯ ವೃಂದ, ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.
