
ಉದಯವಾಹಿನಿ ಕೊಲ್ಹಾರ: ತಾಲೂಕಿನ ಕೂಡಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯ ಜರುಗಿತು.ಅಧ್ಯಕ್ಷರಾಗಿ ಹುಸೇನಬಿ ಮಾಶ್ಯಾಳ, ಉಪಾಧ್ಯಕ್ಷರಾಗಿ ಅರುಣಕುಮಾರ ನಾಯಕ ಆಯ್ಕೆಯಾದರು.ಒಟ್ಟು ೨೦ ಜನ ಸದಸ್ಯ ಬಲಾಬಲದ ಕೂಡಗಿ ಗ್ರಾಮ ಪಂಚಾಯತನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಸೋಮಶೇಖರ್ ಸೂಳಿಬಾಯಿ ಅವರು ಘೋಷಣೆ ಮಾಡಿದರು.ಗ್ರಾಮ ಪಂಚಾಯತ್ ಸದಸ್ಯ ಆರೀಫ್ ತಾಳಿಕೋಟಿ ಮಾತನಾಡುತ್ತಾ ಸಚಿವ ಶಿವಾನಂದ್ ಪಾಟೀಲರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಸರ್ವ ಸದಸ್ಯರು ಬೆಂಬಲ ನೀಡುವ ಮೂಲಕ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಸಚಿವರ ಮಾರ್ಗದರ್ಶನದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಕೂಡಗಿ ಗ್ರಾಮ ಪಂಚಾಯಿತ್ ಮಾದರಿ ಪಂಚಾಯಿತಿ ಯನ್ನಾಗಿ ರೂಪಿಸಲಾಗುವುದು ಸರ್ವ ಸದಸ್ಯರು ಒಗೂಂಡಿ ಕೊಂಡು ಇರುತ್ತವೆಂದು ಹೇಳಿದರು.ವಿಜಯೋತ್ಸವ. ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯ ನಂತರ ಅಭಿಮಾನಿಗಳು ಪರಸ್ಪರ ಗುಲಾಲು ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮೆಹರಾಜ ಪೀರಾ ಜಾಗೀರದಾರ, ಹಸನ ಕೊಲ್ಹಾರ. ಅಕ್ಬರ ವಾಲಿಕಾರ, ಈರಣ್ಣ ಭೂವಿ, ಪಿಂಟು ರಾಠೋಡ, ರತನಸಿಂಗ್ ರಾಠೋಡ, ಬಾಬುಸಾಬ ಗಡೇದ ಗ್ರಾಮದ ಯುವಕರು, ಹಿರಿಯರು ಮತ್ತಿತರು ಭಾಗವಹಿಸಿದರು
