ಉದಯವಾಹಿನಿ ತಾಳಿಕೋಟಿ: ತಾಲೂಕಿನ ಅಸ್ಕಿ ಗ್ರಾಮ ಪಂಚಾಯತನ ಎರಡನೇಯ ಅವಧಿಗೆ ಅಧ್ಯಕ್ಷೆಯಾಗಿ ರಾಜೇಶ್ವರಿ ತಿಪ್ಪಣ್ಣ ಮಾದರ ಹಾಗೂ ಉಪಾಧ್ಯಕ್ಷೆಯಾಗಿ ಎಂಕಮ್ಮ ದೇವೆಂದ್ರಪ್ಪ ಕಟ್ಟಿಮನಿ ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ಅಸ್ಕಿ ಗ್ರಾಮ ಪಂಚಾಯತದ ಎರಡನೇಯ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಎಸ್.ಸಿ.ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಒಟ್ಟು ೧೪ ಸದಸ್ಯರನ್ನು ಹೊಂದಿದ ಗ್ರಾಪಂಗೆ ಎಲ್ಲ ೧೪ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ರಾಜೇಶ್ವರಿ ತಿಪ್ಪಣ್ಣ ಮಾದರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂಕಮ್ಮ ದೇವೆಂದ್ರಪ್ಪ ಕಟ್ಟಿಮನಿ ಇಬ್ಬರೆ ನಾಮಪತ್ರ ಸಲ್ಲಿಸಿರುವುದರಿಂದ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಮಂಜುನಾಥ ಹೊಸಮನಿ ಅವರು ಘೋಷಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎನ್.ಎಸ್. ದೊಡಮನಿ ಸಹಾಯಕರಾಗಿ ಕಾರ್ಯನಿರ್ವಹಿಸಿದರು.
ಈ ವೇಳೆ ಗ್ರಾಪಂ ಸರ್ವಸದಸ್ಯರು, ಪಿಕೆಪಿಎಸ್ ಮಾಜಿ ಅಧ್ಯಕ್ಷ ಕಾಶಿನಾಥ ತಳವಾರ, ರಾಮನಗೌಡ ಬಿರಾದಾರ, ಮಲ್ಲಣ್ಣ ಹಿರೇಕುರುಬರ, ಹಜರತ್ ಹುಸೇನಿ ತಾಳಿಕೋಟಿ, ಮಲ್ಲನಗೌಡ ಬಿರಾದಾರ, ಮಹಾದೇವ ವಾಲಿಕಾರ, ರವಿ ಮಗದಾಳ, ಮತ್ತಿತರರು ಉಪಸ್ಥಿತರಿದ್ದರು.
