
ಉದಯವಾಹಿನಿ,ಕಾರಟಗಿ: 32//3ಉಪ ಕಾಲುವೆಯ ಕೆಳಭಾಗಕ್ಕೆ ಅಸಮರ್ಪ ನೀರು ಪೂರೈಕೆ ಬೇಸತ್ತ ಕಾರಟಗಿ, ಚಂದನಹಳ್ಳಿ,ಕೊ0ತನೂರ ಗ್ರಾಮಗಳ ರೈತರು ಪಟ್ಟಣದ ಆರ್.ಜಿ. ರಸ್ತೆಯ ನಿರಾವರಿ ನಿಗಮದ ನಂ. ೨ ಕಾಲುವೆ ಉಪವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾನಿರತ ರೈತರು ಮಾತನಾಡಿ 32 ನೇ ವಿತರಣಾಕಾಲುವೆಯ 32/3 ಕಾಲುವೆಗೆ ಸಮರ್ಪಕ ನಿರ್ವಹಣೆ ಇಲ್ಲದೆ ಕಾಲುವೆ ಮೇಲ್ಭಾಗದ ರೈತರು ನರ‍್ಗಳ್ಳತನ ಮಾಡಿ ಅನಧಿಕೃತವಾಗಿ ನೀರಾವರಿ ಮಾಡುತ್ತಿದ್ದಾರೆ. ಈ ಕುರಿತು ಹಲವಾರು ಬಾರಿ ಮಂತ್ರಿ ಮಹೋದಯರು ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿದರೂ ಕೂಡ ಇವರೆಗೂ ಯಾವುದೆ ಕಾನೂನುರಿತ್ಯ ಕ್ರಮ ಕೈಗೊಂಡಿಲ್ಲಾ.
ನೀರಾವರಿ ಇಲಾಖೆಯ ಅಧಿಕಾರಿಗಳ ಗ್ಯಾಂಗ್‌ಮನ್‌ಗಳ ಕುಮ್ಮಕ್ಕಿನಿಂದ ಮೇಲ್ಬಾಗದ ರೈತರು ಭಾರಿ ಗಾತ್ರದ ಪೈಪ್‌ಗಳನ್ನು ರಾತ್ರಿ ಸಮಯದಲ್ಲಿ ಕಾಲುವೆಗೆ ಹಾಕಿ ಬೆಳಗಿನವರೆಗೂ ಹರಿಸಿಕೊಂಡು ದೊಡ್ಡ ದೊಡ್ಡ ಕೆರೆಗಳನ್ನು ತುಂಬಿಸಿಕೊ0ಡು ಆಕ್ರಮ ನೀರಾವರಿ ಮಾಡುತ್ತಿದ್ದಾರೆ. ಕಾಲುವೆಗಳಲ್ಲಿ ಗೀಡಗಂಟಿ ಕಸ ಸಂಗ್ರಹಣೆಗೊ0ಡರೂ ಕೂಡ ನೀರಾವರಿ ಇಲಾಖೆ ಅಧಿಕಾರಿಗಳು ಕಣ್ಣೆತ್ತಿ ನೋಡುತ್ತಿಲ್ಲಾ ಎಂದು ರೈತರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗದುಕೊಂಡರು. .
32/3 ನೇ ವಿತರಣಾಕಾಲುವೆಗೆ ಗೇಜ್ ಕೂಡಿಸಬೇಕು. ನಿಗಧಿಪಡಿಸದಂತೆ ಒಂದು ಫೀಟ್ ೯ ಇಂಚ್ ನಿತ್ಯ ನೀರು ಹರಿಸಬೆಕು. ಕೆಳಭಾಗದ ರೈತರಿಗೆ ಯಾವುದೇರೀತಿಯಿಂದ ನೀರಿನ ತೊಂದರೆಯಾಗದ0ತೆ ನೀರು ನಿರ್ವಹಣೆ ಮಾಡಬೇಕು ಮೇಲ್ಭಾಗದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಆಕ್ರಮ ನೀರಾವರಿಗೆ ಕಡಿವಾಣಹಾಕಬೇಕು. ಹಾಗೂ ಕಾಲುವೆಯಿಂದ ನೀರು ಪಡೆಯಲು ಆಕ್ರಮವಾಗಿ ಹಾಕಿರುವ ಪೈಪ್‌ಗಳನ್ನು, ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ 32/3 ಉಪ ಕಾಲುವೆಗೆ ಸಮರ್ಪಕ ನೀರು ಹರಿಸಬೆಕು ಎಂದು ಪಟ್ಟು ಹಿಡಿದರು. ನಂತರ ನೀರಾವರಿ ಇಲಾಖೆ ಅಧಿಕಾರಿಗಳು ನೀಡಿದ ಭರವಸೇಯ ಮೇರೆಗೆ ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ಉಭಯ ಗ್ರಾಮಗಳ ನೂರಾರು ಸಂಖ್ಯೆಯ ರೈತರು ಇದ್ದರು.
