
ಉದಯವಾಹಿನಿ ಕೊಲ್ಹಾರ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಶೇಷ ರೀತಿಯ ದೊಡ್ಡ ಪ್ರಮಾಣದಲ್ಲಿ ತಾಲೂಕಿನ ಬಳೂತಿ ಗ್ರಾಮದಲ್ಲಿ ಮೊಹರಂ ಹಬ್ಬ ಮುಗಿದ 10 ದಿನಗಳ ಬಳಿಕ ಬೀಬಿ ಫಾತಿಮಾ ಜಾರತ್ ಮತ್ತು ಡೋಲಿ ಮೆರವಣಿಗೆ ಜಾತ್ರಾ ಮಹೋತ್ಸವ ಜರುವುದು ಎಂದು ಗ್ರಾಮದ ಯುವಕ ಜಗದೀಶ್ ಸುನಗದ ಹೇಳಿದರು
ಗುರುವಾರ ಗ್ರಾಮದ ಬೀಬಿ ಫಾತಿಮಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಗಸ್ಟ್ ೬ ರಂದು ರವಿವಾರ ಮುಂಜಾನೆ 11: 00 ಗಂಟೆಗೆ ಶ್ರೀ ಬೀಬಿ ಫಾತಿಮಾ ಜಾರತ್ ಮಹೋತ್ಸವದ ಸಮಾರಂಭದ ಮತ್ತು ಉದ್ಘಾಟಿನೆ ಕಾರ್ಯಕ್ರಮಕ್ಕೆ ಪರಮಪೂಜ್ಯ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಚನ ನೀಡುವುದಕ್ಕೆ ಪಾಲ್ಗೊಳ್ಳಲಿದ್ದು, ಹಾಗೂ ಆಗಸ್ಟ್ ೭ ರಂದು ಸತತವಾಗಿ 9ನೇ ವರ್ಷದ ಶ್ರೀ ಬೀಬಿ ಫಾತಿಮಾ ಜಾರತ್ ಮತ್ತು ಡೋಲಿ ಮೆರವಣಿಗೆ ಜರುಗುವುದು. ಆಗಮಿಸಿದ ಭಕ್ತಾದಿಗಳಿಗೆ ಅನ್ನಪ್ರಸಾದ ಸೇವೆ ಹಮ್ಮಿಕೊಂಡಿದ್ದು,ಆದಕಾರಣ ಎಲ್ಲ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು, ಸದ್ಭಕ್ತರು ಈ ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಳ್ಳಬೇಕೆಂದು ಹೇಳಿದರು
ಈ ಸುದ್ದಿಗೋಷ್ಠಿಯಲ್ಲಿ ಗ್ರಾಮದ ಹಿರಿಯರಾದ ದುಂಡಪ್ಪ ಬನಗೊಂಡ, ನಂದಬಸಪ್ಪ ಚೌದ್ರಿ, ರಾಯಪ್ಪ ಔರಸಂಗ, ಹುಚ್ಚಪ್ಪ ವಾಲಿಕಾರ,ಶೇಖಪ್ಪ ಮಟ್ಟಿಹಾಳ ಅಡಿವೇಪ್ಪಾ ಹೆಬ್ಬಿ, ಸಿದ್ದಪ್ಪ ಶಾವಿಗೊಂಡ,ಪ್ರಕಾಶ ಬಶೆಟ್ಟಿ, ಅಶೋಕ ಮಾಳೆದ, ಶಂಕ್ರಪ್ಪ ಜೈನಾಪುರ, ವಿಠ್ಠಲ ಲೋಕಾಪುರ್, ಸಂಗಪ್ಪ ಚೌದ್ರಿ, ಯುವಕರು ಇತ್ತತರು ಇದ್ದರು
