ಉದಯವಾಹಿನಿ ಕುಶಾಲನಗರ :- ಕಾವ್ಯ ಲಲಿತ ಕಲೆ ಗಳಲ್ಲೊಂದು, ಇತರ ಕಲೆಗಳಿಗಿಂತ  ಅದು ಭಿನ್ನವಾಗಿ ಒಂದು ವೈಶಿಷ್ಟ ವನ್ನು ಪಡೆದುಕೊಂಡಿದೆ. ಅನ್ಯ ಕಲೆಗಳಲ್ಲಿ ಒಂದಕ್ಕೊಂದು ಅದರದೆಯಾದ  ಮಾಧ್ಯಮವುಂಟು, ಕಾವ್ಯಕ್ಕೆ ಹಾಗೆ ಪ್ರತ್ಯೇಕವಾದ ಮಾಧ್ಯಮವಿಲ್ಲ ಕಾವ್ಯವನ್ನು ಅಮೃತವನ್ನು ಕರೆದರು ಹಿಂದಿನವರು, ಕಾವ್ಯ ಸಾರ್ಥಕವಾಗಬೇಕಾದರೆ ಅದು ಓದುಗರ ಹೃದಯ ಮುಖ ಮಾಡಿರಬೇಕು. ಅವರ ಹೃದಯವನ್ನು ಮುಟ್ಟಬೇಕು ತಟ್ಟಬೇಕು ಇಲ್ಲವಾದರೆ ಅಂತಹ ಕಾವ್ಯ ನಿರರ್ಥಕವಾಗುತ್ತದೆ.  ಎಂದು ಸೋಮವಾರಪೇಟೆಯ ಮಹಿಳಾ ಸಮಾಜದಲ್ಲಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ನಡೆದ “ನೆಲ ಮುಗಿಲು” ಕವನ ಸಂಕಲನ ಬಿಡುಗಡೆ ವೇಳೆ ಪ್ರಾದ್ಯಪಕ, ಸಾಹಿತಿ, ಜಾನಪದ ವಿದ್ವಾಂಸ ಡಾ. ಮೋಹನ್ ಪಾಳೇಗಾರ್ ಅಭಿಪ್ರಾಯಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಜಲಜಾ ಶೇಖರ್ ವಿರಚಿತ ” ನೆಲಮುಗಿಲು ಕವನ ಸಂಕಲನ ಮೊದಲ ಪ್ರಯತ್ನದಲ್ಲೇ ಸದನ ಕದನ ಮಾರ್ಮಿಕವಾಗಿರುವುದು ಮಾತ್ರವಲ್ಲ ಅರ್ಥಪೂರ್ಣವೂ, ಸದನ ಕಲಾಪಗಳಿಗೆ  ಹಿಡಿದ ಕನ್ನಡಿಯು ಆಗಿದೆ. ಇವರ ಲೇಖನಿಯಿಂದ ಇನ್ನಷ್ಟು ಮೌಲಿಕ ಹಾಗೂ ಸಮಾಜಕ್ಕೆ ದಾರಿದೀಪವಾಗಿಸುವಂಥ ಕೃತಿಗಳು ಬರಲಿ ಎಂದು ಶುಭ ಕೋರಿದರು.  ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಲಕಾಳಪ್ಪ ಮಾತನಾಡಿ ಶುಭ ಹಾರೈಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಜಲಜ ಶೇಖರ್ ಅವರ ಕವನ ಸಂಕಲನ, ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲೂ ವಿಸ್ತರಿಸಲಿ ಎಂದರು.                      ವೇದಿಕೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಡಿ. ವಿಜೇತ್, ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಇದ್ದು, ಜೆ. ಸಿ. ಶೇಖರ್ ಸ್ವಾಗತಿಸಿ, ಮಂಜುಳಾ ನಿರೂಪಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!