
ಉದಯವಾಹಿನಿ ಸಿಂದಗಿ : ತಾಲೂಕಿನ ರಾಂಪುರ (ಪಿ. ಎ ) ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆಯಿತು.ಗ್ರಾಮ ಪಂಚಾಯತಿ ಎರಡನೇ ಅವಧಿಗೆ
ಅಧ್ಯಕ್ಷರಾಗಿ ನೂರಜಾನಬಿ.ಸಾ ನಧಾಫ ಹಾಗೂ ಉಪಾಧ್ಯಕ್ಷರಾಗಿ ಅನೀಲ ದೋಡಮನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂಧರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ನೂರಾಜಾನಬಿ ನದಾಫ ನನಗೆ ಸತತ ಎರಡನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದೀರಿ, ನಾವು ಚುನಾವಣೆ ವೇಳೆಯಲ್ಲಿ ಮಾತ್ರ ಪಕ್ಷ, ನಂತರ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಪಕ್ಷಾತೀತವಾಗಿ ಶ್ರಮಿಸಿ ಸದ್ಯಸರ ಸಹಕಾರದಿಂದ ಮಾದರಿ ಪಂಚಾಯಿತಿ ಮಾಡಲು ಮುಂದಾಗಬೇಕು ಎಂದು ಹೇಳಿದರು.ಈ ಸಂಧರ್ಭದಲ್ಲಿ ಊರಿನ ಮುಖಂಡರಾದ ದಾದಾಪೀರ ಅಂಗಡಿ, ಮೋದಿನ ಜಮಾದಾರ್, ಇಮ್ರಾನ್ ಬಳಗಾನೂರ, ಆಸೀಫ್ ಆಂದೆಲೆ, ಗುರು ನೆಗನ್ಯಾಳ, ಪ್ರವೀಣ್ ಹಳ್ಳಿ, ಮುದಕಣ್ಣ ಹಿರೇಮಠ, ಅನಿಲ್ ದೊಡ್ಡಮನಿ, ಜಗ್ಗು ನನಶೆಟ್ಟೆ ಹಾಗೂ ಇತರರು ಉಪಸ್ಥಿತರಿದ್ದರು.ನಂತರ ಸಿಹಿ ಹಂಚಿ ವಿಜಯೋತ್ಸವ ನಡೆಯಿತು
