
ಉದಯವಾಹಿನಿ,ಶಿಡ್ಲಘಟ್ಟ :ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿಗೆ ರಾಚನಹಳ್ಳಿಯ ಸುನಂದಮ್ಮ ಅಧ್ಯಕ್ಷೆಯಾಗಿ ಹಾಗೂ ಎಂ ಮುನಿರಾಜು ಉಪಾಧ್ಯಕ್ಷರಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಮಹಿಳೆಗೆ ಅಧ್ಯಕ್ಷ, ಪರಿಶಿಷ್ಟ ಜಾತಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿತ್ತು. ತಲಾ ಒಂದೊಂದೆ ನಾಮಪತ್ರ ಸಲ್ಲಿಕೆ ಆದ ಕಾರಣ 12 ಜನ ಸದಸ್ಯರ ಪೈಕಿ 11 ಸದಸ್ಯರು ಹಾಜರಿದ್ದ ಸಭೆಯಲ್ಲಿ ಈ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ನಗರಸಭೆ ಪೌರಾಯುಕ್ತ ಆರ್ ಶ್ರೀಕಾಂತ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷೆ ರಾಚನಹಳ್ಳಿಯ ಸುನಂದಮ್ಮ ಮಾತನಾಡಿ, ಶಾಸಕ ಬಿ ಎನ್. ರವಿಕುಮಾರ್ ಅವರ ಮಾರ್ಗದರ್ಶನ ಹಾಗೂ ಪಂಚಾಯಿತಿಯ ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಟಿ ಆದಿಲಕ್ಷ್ಮಿ, ಚುನಾವಣಾ ಮಾಸ್ಟರ್ ಹೆಚ್ ಮುನಿರಾಜು,ಮಾಜಿ ಗ್ರಾಪಂ ಅಧ್ಯಕ್ಷ ಕೆ ಹೆಚ್ ಆನಂದರಾಮರೆಡ್ಡಿ,ಚನ್ನಕೇಶವರೆಡ್ಡಿ, ಜೆಡಿಎಸ್ ಯುವ ಮುಖಂಡ ಚಂದ್ರಶೇಖರ್,ರಾಚನಹಳ್ಳಿ ನಾಗಣ್ಣ,ಮಾಜಿ ಗ್ರಾ ಪಂ ಸದಸ್ಯ ಅಂಬರೀಶ್, ಇತರರು ಇದ್ದರು.
