ಉದಯವಾಹಿನಿ ಚಿತ್ರದುರ್ಗ :ತಾಲೂಕಿನ ಕಾವಾಡಿಗರ ಹಟ್ಟಿ ಗ್ರಾಮದಲ್ಲಿ ವಾಂತಿಭೇದಿ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ,ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಇಲಾಖೆ ವಾಂತಿಭೇದಿ ಪ್ರಕರಣಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಪಾಲಿಸುವಂತೆ ಪ್ರಾಚಾರ ಕಾರ್ಯ ಕೈಗೊಂಡಿತ್ತು.
 ಊಟ ಮಾಡುವ ಮುನ್ನ ,ಶೌಚಾಲಯ ಬಳಕೆ ಮಾಡಿದ ನಂತರ, ಸೋಪಿನಿಂದ ಕೈ-ಕಾಲುಗಳನ್ನು ಚೆನ್ನಾಗಿ ಉಜ್ಜಿ ಉಜ್ಜಿ ತೊಳೆದುಕೊಳ್ಳಬೇಕು, ಬಿಸಿ ಬಿಸಿ ಆಹಾರ ಪದಾರ್ಥಗಳನ್ನು ಮಾತ್ರ ಸೇವನೆ ಮಾಡಬೇಕು ತಂಗಳು ತಡಿಗಳನ್ನ ಹಾಗೂ ಬೇಕರಿ ಪದಾರ್ಥಗಳು, ಮತ್ತು  ಕುರುಕಲು ತಿಂಡಿಗಳನ್ನು ತಿನ್ನಬೇಡಿ. ಹಣ್ಣು ತರಕಾರಿಗಳನ್ನ ಉಪ್ಪು ನೀರಿನಿಂದ ತೊಳೆದು ಉಪಯೋಗಿಸಿ ಆಹಾರ ಪದಾರ್ಥಗಳ ಮೇಲೆ ನೊಣಗಳು ಕೂರದಂತೆ ಮುಚ್ಚಿಡಿರಿ.ಕಾಯಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಿರಿ, ಉಗುರುಗಳನ್ನ  ಕತ್ತರಿಸಿಕೊಳ್ಳಿ.ಎಲ್ಲೆಂದರಲ್ಲಿ ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡದಂತೆ ನಿಗಾವಹಿಸಿ.ಶೌಚಾಲಯ ಸ್ವಚ್ಛತೆ ,ಪರಿಸರ ಸ್ವಚ್ಛತೆ, ವಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಶುದ್ಧ ನೀರನ್ನ ಕುಡಿಯಿರಿ. ಯಾರಿಗಾದರೂ ವಾಂತಿಭೇದಿ ಆದಲ್ಲಿ ದಿನದ 24 ಗಂಟೆ ತಮ್ಮ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಸೌಲಭ್ಯ ಇದೆ ಅದರ ಸದುಪಯೋಗಪಡಿಸಿಕೊಳ್ಳಿರಿ .ಯಾರು ಕೂಡ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ವಾಂತಿಭೇದಿ ಪ್ರಕರಣಗಳು ಬಾರದಂತೆ ಕಡಿವಾಣ ಹಾಕಲು ಸಾರ್ವಜನಿಕರು ಸಹಕರಿಸಬೇಕೆಂದು ಆರೋಗ್ಯ ಇಲಾಖೆಯ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ ,ಡಿ.ಗ್ರೂಪ್ ಸಿಬ್ಬಂದಿ ಲಿಂಗೇಶ್, ಸೇರಿದಂತೆ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!