ಉದಯವಾಹಿನಿ ಹುಣಸಗಿ: ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಭಾರಿ ಅವಧಿಗೆ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಕಾಮನಟಗಿ ಗ್ರಾ.ಪಂ ಪರಿಶಿಷ್ಟ ಜಾತಿ ಮೀಸಲಿರುವ ಸ್ಥಾನಕ್ಕೆ ಸಂತೋಷ ದೇವರಮನಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಹಣಮವ್ವ ಕರೆಪ್ಪ ನಾಮಪತ್ರ ಸಲ್ಲಿಸಿದರು. ಯಾವೊಬ್ಬ ಅಭ್ಯರ್ಥಿಯು ನಾಮಪತ್ರ ಸಲ್ಲಿಸದ ಕಾರಣ ಇವರಿಬ್ಬರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಲಿಂಗರಾಜ ತಿಳಿಸಿದ್ದಾರೆ.ಬಿಜೆಪಿ ಪಕ್ಷದ ಬೆಂಬಲಿತ ನೂತನ ಅಧ್ಯಕ್ಷ ಸಂತೋಷ ಸೊನ್ನಾಪೂರ ಮಾತನಾಡಿ, ನನಗೆ ಅಧ್ಯಕ್ಷ ಸ್ಥಾನಕ್ಕೆರಿಸಲು ಪ್ರತ್ಯಕ್ಷ, ಪರೋಕ್ಷವಾಗಿ ಹಾಗೂ ಕಾಮನಟಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಬಿಜೆಪಿ ಮುಖಂಡರಿಗೆ ಸಹಕರಿಸಿರುವದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ನೀಡಿದ ಅವಧಿಯಲ್ಲಿ ನಾನು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡುವುದರ ಜೊತೆಗೆ ಹಿರಿಯರ,ಕಿರಿಯ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡುವದಾಗಿ ಭರವಸೆ ನೀಡಿದರು. ಸಂಜೆ ಚುನಾವಣೆ ಅಧಿಕಾರಿಗಳಿಂದ ಅಧಿಕೃತವಾಗಿ ಘೋಷಣೆ ಹೊರಬಿಳುತ್ತಿದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೇರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಬಸವರಾಜ ದೊರಿ,ಬಸನಗೌಡ ಬಿರದಾರ,ಹುಚ್ಚಪ್ಪ ದೊರಿ,ಸಾಬಣ್ಣ ಬರಿಗಲ್ಲ,ರಾಯಪ್ಪ ಜೋಗಿನ್,ಭೀಮನಾಯಕ,ಬಸವರಾಜ ಕಟ್ಟಿಮನಿ,ಹಣಮಂತ್ರಾಯ ಬೂದಿಹಾಳ,ಅಮರೇಶ ದೊರಿ ಸೊನ್ನಾಪೂರ, ಶಂಕರನಾಯಕ ಕರೆಕಲ್ಲ, ಸೈದಪ್ಪ, ಶರಣು ಸರಗಾರ, ಜೆಟ್ಟೆಪ್ಪ ಹೊಂಬಳಕಲ್ಲ, ಬಸವರಾಜ ಬಿರಾದಾರ, ಮಲ್ಲನಗೌಡ ಸಾಲವಡಗಿ, ಭೀಮಾನಾಯ್ಕ, ಯಮನಪ್ಪ ನಾಯ್ಕೋಡಿ, ವೆಂಕೋಬ ಧೊರಿ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!