
ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನ ಹುಣಶ್ಯಾಳ ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 28 ಜನ ಸದಸ್ಯರು ಸರ್ವಾನುಮತದಿಂದ ಅಧ್ಯಕ್ಷರಾಗಿ ಶ್ರೀಮತಿ ಬೋರಮ್ಮ ಮೌನೇಶ ಪೂಜಾರಿ ಆಯ್ಕೆಯಾದರು ಹಾಗೂ ಉಪಾಧ್ಯಕ್ಷರಾಗಿ ರಘುವೀರ್ ವರ್ಧಮಾನ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಿವಾನಂದ ಬಿರಾದಾರ ತಿಳಿಸಿದರು.ಚುನಾವಣಾ ಪ್ರಕ್ರಿಯೆಗೆ ಪಿಡಿಒ ಕಾಶಿನಾಥ ಕಡಕಬಾವಿ, ಕಾರ್ಯದರ್ಶಿ ಸಿದ್ದಯ್ಯ ಹಿರೇಮಠ ಹಾಗೂ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಚುನಾವಣಾ ಕಾರ್ಯದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.ಇದೇ ಸಂದರ್ಭದಲ್ಲಿ ಗ್ರಾಮಗಳ ಪ್ರಮುಖರಾದ ಗುತ್ತಪ್ಪಗೌಡ ಕೋಟಿಖಾನಿ, ಮಾಂತಗೌಡ ಚೌದರಿ, ಸಿದ್ದನಗೌಡ ಪಾಟೀಲ, ಗುರನಗೌಡ ಚೌದರಿ, ಮಾಂತೇಶ್ ಮುರಕನಾಳ, ಹಣುಮಂತ್ರಾಯಗೌಡ ಚೌದರಿ, ಬಸನಗೌಡ ಕೊಣ್ಣೂರ, ಎಸ್ ಬಿ ಬಂಗಾರಗುಂಡ, ಸುರೇಶಗೌಡ ದೇಸಾಯಿ, ಹುಸೇನ ನಾಗಾವಿ ,ಶಫೀಕ್ ಸಿಪಾಯಿ, ಮೈನುದ್ದೀನ್ ಬಾಗವಾನ, ಶಿವರಾಜ ಕುಂಟೋಜಿ, ಗೊಲ್ಲಾಳ ಕುಂಟೋಜಿ,ನಬಿ ಮುಲ್ಲಾ, ಗಣ್ಯರು, ಪ್ರಮುಖರು,ಹಾಗೂ ಸರ್ವ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸದಸ್ಯರು ಹಾಗೂ ಎರಡನೆ ಅವಧಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರು ತಮ್ಮ ಅವಧಿಯಲ್ಲಿ ಇನ್ನೂ ಹೆಚ್ಚಿನ ಜನಪರ ಕಾರ್ಯ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಸೇವೆ ಮಾಡಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತವಾಗಿ ಕೆಲಸ ಮಾಡಿ.
– ಮೌನೇಶ ಪೂಜಾರಿ,ಎಸ್ ಬಿ ಬಂಗಾರಗುಂಡ,ಗುತ್ತಪ್ಪಗೌಡ ಕೋಟಿಖಾನಿ.
