ಉದಯವಾಹಿನಿ, ನವದೆಹಲಿ: ಸತ್ಯಕ್ಕೆ ಇಂದಲ್ಲಲ್ಲದಿದ್ದರೆ ನಾಳೆ ಸತ್ಯಕ್ಕೆ ಜಯ ಸಿಗುತ್ತದೆ ಎನ್ನುವ ನಂಬಿಕೆ ನಿಜವಾಗಿದೆ. ನನ್ನ ದಾರಿ ಸ್ಪಷ್ಟವಾಗಿದೆ .ಮುಂದಿದೆ ಹೋರಾಟ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ನಾನೇನು ಮಾಡಬೇಕು ಮತ್ತು ನನ್ನ ಕೆಲಸವೇನು ಎಂಬ ಸ್ಪಷ್ಟತೆ ನನ್ನ ಮನಸ್ಸಿನಲ್ಲಿದೆ. ನಮಗೆ ಸಹಾಯ ಮಾಡಿದ ಜನರಿಗೆ ಧನ್ಯವಾದ ಹೇಳುತ್ತೇನೆ, ಅವರ ಪ್ರೀತಿ ಮತ್ತು ಬೆಂಬಲಕ್ಕೆ ಸದಾ ಋಣಿ ಎಂದಿದ್ದಾರೆ.
ಮೋದಿ ಉಪನಾಮದ ಮಾನನಷ್ಟ ಮೊಕದ್ದಮೆಯ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು ಜನರಿಗೆ ಧನ್ಯವಾದ ಹೇಳುತ್ತೇನೆ” ಎಂದು ಹೇಳಿದ್ದಾರೆ. ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಪಿ ಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ, ಗುಜರಾತ್ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷರ ಶಿಕ್ಷೆಗೆ ತಡೆ ನೀಡಿತು. “ಎಲ್ಲಾ ಕಳ್ಳರು ಮೋದಿಯನ್ನು ಸಾಮಾನ್ಯ ಉಪನಾಮವನ್ನಾಗಿ ಮಾಡಿಕೊಂಡರೆ ಹೇಗೆ” ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು

 

Leave a Reply

Your email address will not be published. Required fields are marked *

error: Content is protected !!