ಉದಯವಾಹಿನಿ ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ಶ್ರೀ ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು. ಸಾವಜಿ ಅಭಿವೃದ್ದಿ ನಿಗಮ ಮಂಡಳಿ ಸ್ಥಾಪಿಸುವಂತೆ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಅಧ್ಯಕ್ಷ ವಿ.ಕೆ.ಪಾಟೀಲ್ ಮಾತನಾಡಿ ಸರ್ಕಾರಿ ಗೆಜೆಟ್ನಲ್ಲಿ ೨ಎ ವರ್ಗ, ಪಟೇಗಾರ, ಎಂಬ ನಮ್ಮ ಸಮಾಜವು ರಾಜ್ಯಾದ್ಯಂತ ಶೇ.೮೫ರಷ್ಟು ಕಡುಬಡತನದಲ್ಲಿದ್ದು, ಸೋಡಾ, ತಂಪುಪಾನೀಯ, ಸಾವಜಿ ಹೋಟೆಲ್, ವಾಚ್ ರಿಪೇರಿ, ಆಟೋ, ಗ್ಯಾರೇಜ್, ಮೊಬೈಲ್ ರಿಪೇರಿ, ಆಟೋ ಗ್ಯಾರೇಜ್ ಇನ್ನಿತರ ಕಸುಬಿನ ದಿನಗೂಲಿ ಕೆಲಸಗಳಲ್ಲಿ ತೊಡಗಿದ್ದೇವೆ. ಕೆಲವೇ ಕೆಲವು ಜನ ಉತ್ತಮ ಸ್ಥಿತಿಯಲ್ಲಿದ್ದಾರೆ. ಸರ್ಕಾರಿ ನೌಕರಿಯಲ್ಲಿಯೂ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಸಮಾಜದಲ್ಲಿ ಹಿಂದುಳಿದ ನಮ್ಮ ಸಮಾಜದ ಅಭಿವೃದ್ದಿಗಾಗಿ ಸರ್ಕಾರದಿಂದ ನಿಗಮ ಮಂಡಳಿ ಸ್ಥಾಪನೆ ಮಾಡಿ ನಮ್ಮ ಮುಂದಿನ ಪೀಳಿಗೆಯ ರಕ್ಷಣೆಗೆ ಮುಂದಾಗಬೇಕು ಶ್ರೀ ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತಿಯ ಆಚರಣೆಗೆ ಮುಂದಾಗಬೇಕೆ0ದು ಮನವಿ ಮಾಡಿದರು.
ಇದೇ ವೇಳೆ ಉಪಾಧ್ಯಕ್ಷರಾದ ಮನೋಜ್‌ಸಾ ಎಸ್.ಚೌದರಿ, ಕಾರ್ಯದರ್ಶಿ ಮಂಜುನಾಥ.ಜೆ.ರಾಯಬಾಗಿ, ಖಜಾಂಚಿ ಮೋತಿಲಾಲ್‌ಸಾ.ಹೆಚ್.ಕಾವಡೆ, ಹಾಗೂ ಇನ್ನಿತರ ಪದಾಧಿಕಾರಿಗಳು ಇದ್ದರು.
