ಉದಯವಾಹಿನಿ, ನ್ಯೂಯಾರ್ಕ್ :  ಕೆಲದಿನಗಳ ಹಿಂದೆ ಸಂಪರ್ಕ ಕಳೆದುಕೊಂಡಿದ್ದ ವಾಯೇಜರ್-೨ ಜೊತೆ ಭಾಗಶಃ ಸಂಪರ್ಕ ಸಾಧಿಸಿದ್ದ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಇದೀಗ ಅದರ ಜೊತೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದೆ. ನಿರೀಕ್ಷೆಗಿಂತಲೂ ಬೇಗವಾಗಿ ವಾಯೇಜರ್-೨ ಜೊತೆ ಸಂಪೂರ್ಣ ಸಂಪರ್ಕ ಸಾಧಿಸುವ ಮೂಲಕ ನಾಸಾ ಎಲ್ಲರ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ಕೆಲದಿನಗಳ ಹಿಂದೆ ವಾಯೇಜರ್-೨ ಜೊತೆ ನಾಸಾ ಭಾಗಶಃ ಸಂಪರ್ಕ ಸಾಧಿಸಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಕ್ಟೋಬರ್ ವರೆಗೂ ಸಮಯ ಹಿಡಿಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಅವಧಿಗೂ ಮುನ್ನವೇ ನಾಸಾ ಅತ್ಯದ್ಬುತ ಕಾರ್ಯದ ಮೂಲಕ ಗಮನ ಸೆಳೆದಿದೆ. ೧೯೭೭ರಲ್ಲಿ ಗಗನಕ್ಕೆ ಚಿಮ್ಮಿಸಲಾಗಿದ್ದ ವಾಯೇಜರ್-೨ ಈಗಲೂ ವಿಶ್ವವನ್ನು ಅನ್ವೇಷಿಸುವ ಕಾರ್ಯದಲ್ಲಿ ನಿರತವಾಗಿದ್ದು, ಸದ್ಯ ಭೂಮಿಯಿಂದ ೧೨ ಶತಕೋಟಿ ಕಿ.ಮೀ.ಗಿಂತಲೂ ದೂರದಲ್ಲಿದೆ. ಆದರೆ ಕಳೆದ ಕೆಲವು ದಿನಗಳಿಂದ ತಪ್ಪಿ ಹೋಗಿದ್ದ ಸಂಪರ್ಕವನ್ನು ಭಾಗಶಃ ಮರುಸ್ಥಾಪಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!