ಉದಯವಾಹಿನಿ, ಅರಸೀಕೆರೆ : ರೈಲ್ವೆ ನಿಲ್ದಾಣ ಅಮೃತ ಭಾರತ್ ನಿಲ್ದಾಣ ಯೋಜನೆ ಅಡಿ ಪುನರಾಭಿರುದ್ಧಿ ಯೋಜನೆಯಲ್ಲಿ 34 ಕೋಟಿ ಹಣ ಬಿಡುಗಡೆಯಾಗಿದ್ದು ಈ ಯೋಜನೆ ಅರಸೀಕೆರೆಯ ರೈಲ್ವೆ ನಿಲ್ದಾಣ ಸಂಪೂರ್ಣ ಮೇಲ್ದರ್ಜೆಗೆ ಯೆರಲಿದ್ದು ಇದರಿಂದ ಪ್ರಯಾಣಿಕರಿಗೆ ಸದುಪಯೋಗವಾಗಲಿದೆ ಈ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರಿಗೆ ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡರು ಮತ್ತು ಹಾಸನ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ರವರು ಪತ್ರದ ಮುಖಾಂತರ ಹಲವು ಬಾರಿ ಮನವಿ ಮಾಡಿದ್ದರ ಫಲವಾಗಿ ಪ್ರಧಾನ ಮಂತ್ರಿಗಳು ಸ್ಪಂದಿಸಿ ಅರಸೀಕೆರೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಚಿಗೆರಿಸಿದ್ದಾರೆ ಇದರ ಉದ್ಘಾಟನೆಯನ್ನು ನಾಳೆ ಬೆಳಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು
ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ಅರಸೀಕೆರೆ ನಾಗರಿಕರ ಪರವಾಗಿ ಅಭಿನಂದನೆ : ಹೊಸೂರ್ ಗಂಗಾಧರ್
ಅರಸೀಕೆರೆ ನಾಗರಿಕ ಪರವಾಗಿ ಮತ್ತು ಸಂಘ ಸಂಸ್ಥೆಗಳ ಪರವಾಗಿ ಪ್ರಧಾನ ಮಂತ್ರಿಗಳ ಗಮನ ಸೆಳೆದು ಅರಸೀಕೆರೆ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ತಗು ಲುಪುವಂತೆ ಮಾಡಿ ಅರಸಿಕೆರೆ ನಗರದ ರೈಲ್ವೆ ನಿಲ್ದಾಣ ಪ್ರತಿನಿತ್ಯ ಸಹಸ್ರಾರು ಪ್ರಯಾಣಿಕರು ಪಯಣಿಸುತ್ತಿದ್ದು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾಡಿದ ದೇಶದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಮತ್ತು ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರಜ್ವಲ್ ರೇವಣ್ಣ ರವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾದ ಹೊಸೂರು ಗಂಗಾಧರ್ ಹೇಳಿದರು.
