ಉದಯವಾಹಿನಿ,ಚಿತ್ರದುರ್ಗ/ಸಜ್ಜನಕೆರೆ: ಬೆಳೆಯುವ ಮಕ್ಕಳ ದೇಹ ವಿಸ್ತಾರವಾಗಿ ಮತ್ತು ಎತ್ತರವಾಗಿ ಬೆಳೆಯಲು, ಬೆನ್ನೆಲುಬು ಎದೆಗೂಡು ಹಿಗ್ಗಲು ಬುದ್ಧಿಯು ಚುರುಕುಗೊಳ್ಳಲು ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಮಕ್ಕಳಿಗೆ ಪ್ರತಿದಿನ ತಾಡಾಸನ, ವೃಕ್ಷಾಸನ , ಗರುಢಾಸನದ ಜೊತೆಗೆ ಸೂರ್ಯನಮಸ್ಕಾರ ಅಭ್ಯಾಸ ಮಾಡಿಸಿದರೆ ಸಾಕು ಮಾರುಕಟ್ಟೆಯಲ್ಲಿ ದೊರಕುವ ಯಾವುದೇ ಪಾನೀಯಗಳನ್ನು ನೀಡುವ ಅವಶ್ಯಕತೆ ಇಲ್ಲ ಮಾರುಕಟ್ಟೆಯ ರಸಾಯನಿಕ ಮಿಶ್ರಿತ ಪದಾರ್ಥಗಳು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೇ ಹೆಚ್ಚು ಅದರ ಬದಲಾಗಿ ಯೋಗ ಧ್ಯಾನಗಳ ಅಭ್ಯಾಸ ಮಾಡುವುದು ಸೂಕ್ತ” ಎಂದು ಯೋಗ ಗುರು ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ದಿನಾಂಕ 05/8/2023ರ ಶನಿವಾರ ಜಿ೩ ಆಯುಷ್ ಇಲಾಖೆಯ ಸಹಯೋಗದಲ್ಲಿ ಜೆ ಎನ್ ಕೋಟೆ ಆಯುಷ ಆಯುರ್ವೇದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಸಜ್ಜನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಯೋಗ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ತರಿಗೆ ಯೋಗ ತರಬೇತಿ ನೀಡಿ ಮಾತನಾಡಿದರು. ಒಟ್ಟು 112 ಫಲಾನುಭವಿಗಳು ಇದರ ಲಾಭ ಪಡೆದರು.ಇದೇ ಸಂಧರ್ಭದಲ್ಲಿ ನಡೆಸಲಾದ ಯೋಗ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸೇರಿದಂತೆ ಶಾಲಾ ಶಿಕ್ಷಕರು, ಸೇರಿ ಗ್ರಾಮದ ಬೀದಿಗಳಲ್ಲಿ ಸುತ್ತಾಡಿ ಯೋಗ ಮಾಡಿ ನಿರೋಗಿಯಾಗಿ, ಯೋಗವೇ ಜೀವನ ಎಂಬ ಘೋಷಣೆಗಳನ್ನು ಕೂಗುತ್ತಾ ಗ್ರಾಮಸ್ಥರಲ್ಲಿ ಯೋಗದ ಬಗ್ಗೆ ಅರಿವು ಮೂಡಿಸಿದರು.ಕಾರ್ಯಕ್ರಮ ಕುರಿತು ಮಾತನಾಡಿದ ಶಾಲೆಯ ಶಿಕ್ಷಕರಾದ ಆರ್. ಸತೀಶಪ್ಪ ಮಾತನಾಡಿ ಇಂದಿನ ದಿನ ಮಾನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಯೋಗ ತರಬೇತಿ ಪಡೆಯುವ ಅವಶ್ಯಕತೆ ಇದೆ ನಮ್ಮ ಚಿತ್ರದುರ್ಗ ತಾಲ್ಲೂಕಿನ ಜೆ ಎನ್ ಕೋಟೆ ಆಯುಷ್ ಆಯುರ್ವೇದ ಕ್ಷೇಮ ಕೇಂದ್ರದಿಂದ ಹಮ್ಮಿಕೊಳ್ಳುತ್ತಿರುವ ಯೋಗ ಪ್ರಚಾರ ಕಾರ್ಯ ಶ್ಲಾಘನೀಯವಾದದ್ದು ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಎಸ್. ವೆಂಕಟೇಶ್,ಬಿ.ಆರ್.ಶ್ರೀಲಕ್ಷ್ಮಿ, ಸಿ.ನಿರ್ಮಲಮ್ಮ, ಕೆ.ಬಿ ರವಿ ಬಿಸಿಯೂಟ ಸಿಬ್ಬಂದಿ ದಾಕ್ಷಯಾಣಮ್ಮ, ಗಿರಿಜಮ್ಮ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!