
ಉದಯವಾಹಿನಿ,ಇಂಡಿ: ಇಂಡಿ ತಾಲೂಕಿನ ಮುಸ್ಲಿಂ ಬಂಧುಗಳ ಪವಿತ್ರ ಹಜ್ ಯಾತ್ರೆ ಪೂರ್ಣಗೊಳಿಸಿ ಆಗಮಿಸಿದ ಮೌಲಾನಾ ಶಾಕೀರ್ ಹುಸೇನ್ ಕಾಸ್ಮಿ ಅವರಿಗೆ ಪಟ್ಟಣದ ಮಾಡೆಲ್ ಉರ್ದು ಪ್ರೌಢಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ರಹಿಮ್ ಅರಬ, ನಾಡಿನಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತಾಗಲು ಮತ್ತು ಮಾನವೀಯ ಸಂಬಂಧಗಳನ್ನು ಸದೃಡಗೊಳಿಸಿ ಮನುಕುಲವನ್ನು ಗೌರವಿಸಲು ದೇವರ ಅನುಗ್ರಹ ಬಹು ಮುಖ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಮೌಲಾನಾ ಶಾಕಿರ್ ಹುಸೇನ್ ಕಾಸ್ಮಿ,ಸಮಾಜ ಸೇವಕ ಹಸನ ಮುಜಾವರ, ಶಾಲಾ ಮುಖ್ಯ ಶಿಕ್ಷಕ ರಫೀಕ್ ಮುಲ್ಲಾ, ಸಲಾವದ್ದೀನ್ ನಾಗೂರ,ಅಬ್ದುಲ್ ಪಟೇಲ್,ನಾಸಿರ್ ಇನಾಮದಾರ, ಮುಜೀಬ್ ಅಫಜಲಪುರ, ಮುನ್ನಾ ಇಂಡೀಕರ್ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.
