
ಉದಯವಾಹಿನಿ,ಶಿಡ್ಲಘಟ್ಟ :ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಅಧ್ಯಕ್ಷೆಯಾಗಿ ಲಕ್ಷ್ಮಮ್ಮಬೈರಾರೆಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಸಾಮಾನ್ಯ ಅಭ್ಯರ್ಥಿಯಾಗಿ ಡಿ ಸಿ ಮಂಜುನಾಥ್ ಜಯಶೀಲರಾಗಿದ್ದಾರೆ.
ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿಯ ಒಟ್ಟು 17 ಸದಸ್ಯರಿದ್ದು, ಸಾಮಾನ್ಯ ಮಹಿಳಾ ಅಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಲಕ್ಷ್ಮಮ್ಮಬೈರಾರೆಡ್ಡಿ ಕೆ ಮತ್ತು ಜೆಡಿಎಸ್ ಬೆಂಬಲಿತ ಗಿರಿಜಾಂಬ ಸೀತಾರಾಮಪ್ಪ ಎಂಬ ಎರಡು ನಾಮಪತ್ರ ಸಲ್ಲಿಸಿದ್ದು, ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸಿ ಮಂಜುನಾಥ್,ಜೆಡಿಎಸ್ ಬೆಂಬಲಿತ ಸಿ.ವೆಂಕಟೇಶಪ್ಪ ಮತ್ತು ಮುನಿನರಸಿಂಹಪ್ಪ ಸೇರಿ ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಾಗಿತ್ತು.ನಿಗದಿತ ಸಮಯದಲ್ಲಿ ಉಪಾಧ್ಯಕ್ಷ ಸ್ಥಾನದಿಂದ ಸಿ ವೆಂಕಟೇಶಪ್ಪ ಅವರು ನಾಮಪತ್ರವನ್ನು ಹಿಂಪಡೆದರು.
ಎರಡು ಸ್ಥಾನಗಳಿಗಾಗಿ ನಡೆದ ಗೌಪ್ಯ ಮತದಾನದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಕ್ಷ್ಮಮ್ಮ,ಉಪಾಧ್ಯಕ್ಷ ಡಿ ಸಿ ಮಂಜುನಾಥ್ ಅವರು ತಲಾ 11 ಮತಗಳು ಪಡೆದು 5 ಮತಗಳ ಅಂತರದಿಂದ ಜಯಶೀಲರಾದರು ಎಂದು ಚುನಾವಣಾ ಅಧಿಕಾರಿ ಸಂತೋಷ್ ತಿಳಿಸಿದರು.ಇನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗಿರಿಜಾಂಬ,ಮತ್ತು ಮುನಿನರಸಿಂಹಪ್ಪ ಅವರು ತಲಾ 6 ಮತಗಳು ಪಡೆದು ಪರಾಭವಗೊಂಡರು.
ನೂತನ ಅಧ್ಯಕ್ಷೆ ಲಕ್ಷ್ಮಮ್ಮ ಬೈರಾರೆಡ್ಡಿ ಮಾತನಾಡಿ ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತೇನೆ, ಗ್ರಾಮ ಪಂಚಾಯಿತಿಯ ಮೂಲಭೂತ ಸೌಲಭ್ಯಗಳನ್ನು ಪ್ರಮಾಣಿಕವಾಗಿ ನೀಡಲು ಪ್ರಯತ್ನಿಸುತ್ತೇನೆ ಎಂದರು.ಉಪಾಧ್ಯಕ್ಷ ಡಿಸಿ ಮಂಜುನಾಥ್ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿಯ ನೈರ್ಮೈಲೀಕರಣ ಶುಚಿತ್ವ,ವಿದ್ಯತ್ ದೀಪಗಳು ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಹೊತ್ತು ನೀಡಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಕಿರಣ್,ಅಭಿವೃದ್ಧಿ ಅಧಿಕಾರಿ ವಜ್ರೇಶ್,ಮಾಜಿ ಗ್ರಾ ಪಂ ಅಧ್ಯಕ್ಷ ಟಿಎಸ್ ಗೋಪಾಲರೆಡ್ಡಿ,ಉಪಾಧ್ಯಕ್ಷೆ ಗೀತಾ ಹೆಚ್,ಸದಸ್ಯರಾದ ಮುರಳಿ ಎ,ರಾಮಕೃಷ್ಣಪ್ಪ, ವೆಂಕಟಲಕ್ಷ್ಮಮ್ಮ ಮುನಿಶಾಮಿ,ಸಿಕೆ ಮಂಜುನಾಥ್, ಎ ಎಲ್
ಮಂಜುನಾಥ್, ಅಶ್ವತ್ಥಮ್ಮ, ವೆಂಕಟರತ್ನಮ್ಮ, ಲಕ್ಷ್ಮಿದೇವಿ, ನವೀನ್ ರೆಡ್ಡಿ,ಎ ಎಂ ವೆಂಕಟರೆಡ್ಡಿ,ಎಸ್ ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರಪ್ಪ, ಮಾಜಿ ಅಧ್ಯಕ್ಷ ನಾರಾಯಣಪ್ಪ,ಎ ವಿ ಕುಮಾರ್,ಕೆ,ಎಸ್ ಶಿವಾರೆಡ್ಡಿ,ಗ್ರಾ ಪಂ ಸಿಬ್ಬಂದಿ ಹಾಗೂ ಮತ್ತಿತರರು ಇದ್ದರು.
