
ಉದಯವಾಹಿನಿ,ಕೋಲಾರ :– ಪ್ರತಿ ವಿದ್ಯಾರ್ಥಿಯ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು ಎಂದು ಶಾಲೆಯ ಮುಖ್ಯಶಿಕ್ಷಕ ಎನ್.ಪ್ರಕಾಶ್ ರವರು ತಿಳಿಸಿದರು.
ತಾಲೂಕಿನ ನರಸಾಪುರ ಹೋಬಳಿಯ ಗುಟ್ಟಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ನಾಗಲಾಪುರ ಗ್ರಾಮದ ವಾಸಿ ಸಿದ್ದಲಿಂಗ ದೇವರು ವಯೋನಿವೃತ್ತಿ ಹೊಂದಿದ್ದು ಶಿಕ್ಷಕರಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇವರು ಗುಟ್ಟಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ನಾಗಲಾಪುರ ಗ್ರಾಮದ ವಾಸಿ ಸಿದ್ದಲಿಂಗ ದೇವರು ರವರು ಶಿಕ್ಷಣ ಇಲಾಖೆಯಲ್ಲಿ ಸತತ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಾಣ ಮಾಡಿರುತ್ತಾರೆ.ನಿವೃತ್ತಿ ಶಿಕ್ಷಕ ಸಿದ್ದಲಿಂಗ ದೇವರು ರವರು ಮಾತನಾಡಿ ಹಲವು ವರ್ಷಗಳ ಸಮರ್ಪಿತ ಸೇವೆಯ ನಂತರ ನಾನು ಶಿಕ್ಷಕನಾಗಿದ್ದ ನನ್ನ ಪಾತ್ರದಿಂದ ನಿವೃತ್ತಿ ಹೊಂದುತ್ತಿರುವ ನನಗೆ ಇಂದು ಕಹಿ ಕ್ಷಣವಾಗಿದೆ.ಗುರುಗಳಾದವರು ಮೌಲ್ಯಗಳ ಸಂರಕ್ಷಕರು, ಮಕ್ಕಳು ಗುರುಗಳ ಬಳಿ ಬಂದ ಬಿಳೀ ಹಾಳೆಗಳು ಅದರ ಮೇಲೆ ಗುರುಗಳದೇ ಮೊದಲ ಹಚ್ಚು, ಆದುದರಿಂದ ಗುರುಗಳಾದವರು ಆದರ್ಶಪ್ರಾಯರಾಗಿರಬೇಕು. ಅದರಂತೆ ವಿದ್ಯಾರ್ಥಿಗಳು ಸಹ ಆದರ್ಶ ವಿದ್ಯಾರ್ಥಿಯಾಗಿ ಬಾಳಬೇಕು ಎಂದರು.
ಇಂದು ನಾನು ಇಲ್ಲಿ ನಿಂತಿರುವಾಗ ನನ್ನ ಮನಸ್ಸು ನಾನು ಮಿಶ್ರ ಭಾವನೆಗಳಿಂದ ತುಂಬಿದೆ ಇಂತಹ ಅದ್ಭುತ ಸಮುದಾಯವನ್ನು ತೊರೆಯುತ್ತಿರುವ ದುಃಖವೂ ಇದೆ, ವಿದ್ಯಾರ್ಥಿಗಳು ಯಶಸ್ವಿಯಾಗುವುದನ್ನು ಮತ್ತು ಸವಾಲುಗಳನ್ನು ಜಯಿಸುವುದನ್ನು ರೂಡಿ ಮಾಡಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ನಿವೃತ್ತಿ ಶಿಕ್ಷಕ ಸಿದ್ದಲಿಂಗ ದೇವರು ರವರನ್ನು ಶಾಲೆ, ಎಸ್ ಡಿ ಎಮ್ ಸಿ, ಶಿಕ್ಷಣ ಇಲಾಖೆ, ಸಹಪಾಠಿಗಳಿಂದ ಮತ್ತು ಗ್ರಾಮದ ಮುಖಂಡರು ವತಿಯಿಂದ ಸನ್ಮಾನಿಸಿದರು.ಈ ಕಾರ್ಯಕ್ರಮದಲ್ಲಿ ಬಿ ಆರ್ ಪಿ ಮಲ್ಲಿಕಾರ್ಜುನ್, ಸಿ ಆರ್ ಪಿ ಗೋವಿಂದ್ ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷೇ ಸಂಗೀತಾ, ಸದಸ್ಯ ಗೋಪಾಲಕೃಷ್ಣ, ಗ್ರಾಮ ಪಂಚಾಯತಿ ಸದಸ್ಯ ವೆಂಕಟೇಗೌಡ, ಮಾಜಿ ಸದಸ್ಯ ವೆಂಕಟೇಶ್, ಎಸ್ ಡಿ ಎಂ ಸಿ ಮಾಜಿ ಸದಸ್ಯ ನಾಗರಾಜ್, ಶಿಕ್ಷಕರ ರಾಘವೇಂದ್ರ ಗ್ರಾಮದ ಮುಖಂಡರುಗಳಾದ ಪುನೀತ್, ಶಶಿ, ಚೇತನ್, ಸುರೇಶ್, ಬಿ ಪುನೀತ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
