????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಉದಯವಾಹಿನಿ ಮಸ್ಕಿ: ಇಲ್ಲಿನ ಪುರಸಭೆ ಗ್ರಾಪಂದಿ0ದ ಪುರಸಭೆಯಾಗಿ ಮೇಲ್ದರ್ಜೆಗೇರಿ ಏಳೆಂಟು ವರ್ಷಗಳೆ ಗತಿಸಿದ್ದು, ಆದರೆ ಜನಬಿಡಿತ ಪ್ರದೇಶಗಳಲ್ಲಿ ಜನರಿಗೆ ಅನೂಕೂಲವಾಗುವ ರೀತಿಯಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಿರುವುದಿಲ್ಲ, ಎಲ್ಲಿ ಅನುಪಯುಕ್ತ ಜಾಗ ಕಾಣುತ್ತದೆಯೋ ಅಲ್ಲಿ ಜನರು ಮೂತ್ರ ವಿಸರ್ಜನೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಹೌದು ಪಟ್ಟಣದ ಹೃದಯ ಭಾಗದಲ್ಲಿರುವ ಹಳೆ ಬಸ್‌ನಿಲ್ದಾಣ ಬಳಿ ಸಾರ್ವಜನಿಕ ಶೌಚಾಲಯ ಬಿಟ್ಟರೆ ಉಳಿದ ಯಾವ ಜನಬಿಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ಕಾಣುವುದಿಲ್ಲ, ತಾಪಂ ಕಟ್ಟಡದ ಮುಂಭಾಗದಲ್ಲಿ ಹೈಟೇಕ್ ಶೌಚಾಲಯ ಇದ್ದು, ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ರಾತ್ರಿ ಹೊತ್ತು ಅದರ ಮುಂದೆ ಜನರು ಮಲ,ಮೂತ್ರ ವಿಸರ್ಜನೆ ಮಾಡುತ್ತಿದ್ದು, ರಸ್ತೆಯಲ್ಲಿ ಓಡಾಡುವ ಜನರಿಗೆ ಕಿರಿಕಿರಿ ಉಂಟಾಗಿದೆ. ನಾನಾ ಕೆಲಸಕ್ಕೆಂದು ಗ್ರಾಮೀಣ ಭಾಗದಿಂದ ಬರುವ ಜನ ಸಾಮಾನ್ಯರು ಜನರ ಕಣ್ತಪ್ಪಿಸಿ ಕಟ್ಟಡಗಳ ಮರೆಯಲ್ಲಿ, ರಸ್ತೆ ಬದಿಯಲ್ಲಿ ಖಾಲಿ ನಿವೇಶನ ಬಳಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಮಹಿಳೆಯರಿಗಂತು ಪಟ್ಟಣದಲ್ಲಿ ಓಡಾಡಿದರೆ ನರಕಕ್ಕೆ ತಳ್ಳಿದಂತಾಗುತ್ತದೆ. ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸರಕಾರ ಇಷ್ಟೊಂದು ಹಣ ವ್ಯಯಿಸುತ್ತಿದೆ. ಪಟ್ಟಣದಲ್ಲಿ ಬೀದಿಗೊಂದು ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕಷ್ಟವೇ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪುರಸಭೆ ಅಧಿಕಾರಿಗಳು ಸಾರ್ವಜನಿಕ ಶೌಚಾಲಯದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಪಟ್ಟಣದ ಕನಕವೃತ್ತ, ವಾಲ್ಮೀಕಿವೃತ್ತ, ತಾಪಂ ಕಚೇರಿ, ಎಪಿಎಂಸಿ, ತಹಶೀಲ್ದಾರ ಕಚೇರಿ, ಅಶೋಕವೃತ್ತ, ಸಂತೆ ಬಜಾರ ಸೇರಿದಂತೆ ಅಗತ್ಯ ಇರುವ ಜನಬಿಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ಕಲ್ಪಿಸಿ ಜನರಿಗೆ ಶೌಚಾಲಯ ಕಿರಿಕಿರಿ ತಪ್ಪಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.
ಪಟ್ಟಣದ ಮುಖ್ಯ ರಸ್ತೆ ಕಾಮಗಾರಿಯ ಮಾರ್ಕಔಟ್ ಆದ ಬಳಿಕ ಪ್ರಮುಖ ಬೀದಿಗಳಲ್ಲಿ ಜಾಗ ಗುರುತಿಸಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ನರಸರೆಡ್ಡಿ, ಪುರಸಭೆ ಮುಖ್ಯಾಧಿಕಾರಿಗಳು
