ಉದಯವಾಹಿನಿ, ಔರಾದ್ : ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರ ಜನ್ಮದಿನಾಚರಣೆ ಅಂಗವಾಗಿ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಹಿರಿಯ ಕಾಂಗ್ರೆಸ್ ಮುಖಂಡ ಬಸವರಾಜ ದೇಶಮುಖ ಮಾತನಾಡಿ, ಜನಸಾಮಾನ್ಯರ ಸೇವೆಯಲ್ಲಿ ನಿತ್ಯ ತೊಡಗಿಸಿಕೊಂಡಿರುವ ರಾಜ್ಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವ ನಿಸ್ವಾರ್ಥ ಜೀವಿ ಪರಮೇಶ್ವರರಾಗಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ ಸಿದ್ಧಾರ್ಥ, ಸುನಿಲ್ ಮಿತ್ರಾ, ದತ್ತಾತ್ರಿ ಶಿಂದೆ, ರತ್ನದೀಪ್ ಕಸ್ತೂರೆ, ಸುನಿಲ್ ಪಾಟೀಲ್, ಮಾಧವರಾವ್, ಪ್ರಕಾಶ ಕಾಂಬಳೆ, ಪ್ರಕಾಶ್ ವಾಘಮೊರೆ, ಸಂತೋಷ ಮೇತ್ರೆ, ಸೂರ್ಯಕಾಂತ, ಸಂಜು, ಅವಿನಾಶ್ ಏರನಲೆ ಇದ್ದರು.

Leave a Reply

Your email address will not be published. Required fields are marked *

error: Content is protected !!