ಉದಯವಾಹಿನಿ,ಶಿಡ್ಲಘಟ್ಟ: ಸಾರ್ವಜನಿಕರ ಅನುಕೂಲಕ್ಕಾಗಿ ವೈದ್ಯಕೀಯ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಕಣ್ಣು ಅತೀ ಸೂಕ್ಷ್ಮ ಅಂಗವಾಗಿದ್ದು, ಜಾಗೃತಿ ವಹಿಸಬೇಕು ಎಂದು ಶಾಸಕ ಬಿಎನ್ ರವಿಕುಮಾರ್ ತಿಳಿಸಿದರು.ತಾಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿಯ ಪಿಂಡಿಪಾಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ನೇತ್ರ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮನುಷ್ಯನ ಜೀವನದಲ್ಲಿ ಕಣ್ಣುಗಳ ಪಾತ್ರ ಮಹತ್ವದ್ದಾಗಿದ್ದು ಕಣ್ಣುಗಳ ರಕ್ಷಣೆ ಮೂಲಕ ನಮ್ಮ ಜೀವ ಮತ್ತು ಜೀವನವನ್ನೂ ಭದ್ರವಾಗಿಸಿಕೊಳ್ಳಲು ಸಾಧ್ಯವಿದೆ. ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗಾಗಿ ಈ ಗ್ರಾಮದ  ಆನಂದಪ್ಪನವರ ಕುಟುಂಬದ ಡಾ.ನರೇಂದ್ರ ಅವರು ನಾರಾಯಣ ನೇತ್ರಾಲಯ ವತಿಯಿಂದ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುವದಕ್ಕೆ ಶ್ಲಾಘನೀಯವಾಗಿದೆ. ಡಾ. ಡಾ.ಲೋಕೇಶ್ ಮಾತನಾಡಿ ಸುಮಾರು 200ಕ್ಕಿಂತಲೂ ಹೆಚ್ಚು ಜನರ ನೇತ್ರ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 86 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. 68 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಭಾನುವಾರ 40 ಮಂದಿ ಶಸ್ತ್ರಚಿಕಿತ್ಸೆ ಗೆ ಬೆಂಗಳೂರಿನ ಪ್ರತಿಷ್ಠಿತ ನಾರಾಯಣ ನೇತ್ರಾಲಯಕ್ಕೆ ತೆರಳಿದರು. ಉಳಿದವರನ್ನು ಮಂಗಳವಾರ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ನೀಡಿ ವಾಪಸ್ ಬಿಡುತ್ತೇವೆ.ಈ ಶಿಬಿರವು ಯಶಸ್ವಿಯಾಗಿ ಜರುಗಿದೆ ಇದರ ಯಶಸ್ವಿಗೆ ಸಹಕಾರ ನೀಡಿದ ಎಲ್ಲ ವೈದ್ಯರಿಗೆ, ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಶಿಡ್ಲಘಟ್ಟ ಕ್ಷೇತ್ರದ ಜನತೆಗೆ ಉತ್ತಮ ಆರೋಗ್ಯ ಹಾಗೂ ಉತ್ತಮ ವಿದ್ಯಾಭ್ಯಾಸ ನೀಡಿ. ಇವೆರಡಕ್ಕೂ ಪ್ರಥಮ ಆದ್ಯತೆ ನೀಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ನೀಡಿ,ಯಾವುದೇ ರೀತಿಯ ಉಚಿತ ಭಾಗ್ಯಗಳನ್ನು ನೀಡಬೇಡಿ,  ಎಂದು ಶಾಸಕರಿಗೆ ಮನವಿ ಮಾಡಿದರು.
– ಡಾ.ನರೇಂದ್ರ ಸಿಒಒ ನಾರಾಯಣ ನೇತ್ರಾಲಯ
ಈ ಸಂದರ್ಭದಲ್ಲಿ .ಜಿ ಪಂ ಮಾಜಿ ಸದಸ್ಯರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ,ಮಳ್ಳೂರು ಪಿಳ್ಳ ವೆಂಕಟಸ್ವಾಮಿ,ತಾದುರು ರಘು,ಡಾ.ಲೋಕೇಶ್,ಕುಮಾರ್,ಕಿಶೋರ್,ಸತ್ಯರಾಜ್,ಕೊತ್ತನೂರು ಪತಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!